ಭಯೋತ್ಪಾದನೆ ನಿಗ್ರಹ ದಳದ ಎಸ್ಪಿ ಕಾರಿನಲ್ಲಿ ಮಹಿಳೆ ಜೊತೆ ಶವವಾಗಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Ashish-Prabhakar

ಜೈಪುರ, ಡಿ.23-ರಾಜಸ್ತಾನ ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೀಶ್ ಪ್ರಭಾಕರ್ (45) ಮತ್ತು ಮಹಿಳೆಯೊಬ್ಬಳ ಮೃತದೇಹಗಳು ಸರ್ಕಾರಿ ಕಾರಿನಲ್ಲಿ ಪತ್ತೆಯಾಗಿದ್ದು, ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.  ರಾಜಸ್ತಾನದ ಶಿವದಾಸ್‍ಪುರ್‍ನ ಮಹಲ್ ರಸ್ತೆಯಲ್ಲಿ ನಿನ್ನೆ ರಾತ್ರಿ 9ರ ಸುಮಾರಿನಲ್ಲಿ ಪಾದಚಾರಿಯೊಬ್ಬನಿಗೆ ಪೊಲೀಸ್ ವಾಹನದಲ್ಲಿ ಗುಂಡುಗಳನ್ನು ಹಾರಿಸಿದ ಶಬ್ಧ ಕೇಳಿಸಿತು. ನಂತರ ಸ್ಥಳೀಯರು ಅನುಮಾನದಿಂದ ವಾಹನದ ಬಳಿ ತೆರಳಿ ವೀಕ್ಷಿಸಿದಾಗ ಇಬ್ಬರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತು.

Firin11

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳವನ್ನು ಕೂಲಂಕಷವಾಗಿ ಪರಿಶೀಲಿಸಿದರು. ಶವಗಳ ಪಕ್ಕದಲ್ಲಿ ಪೊಲೀಸ್ ಉನ್ನತಾಧಿಕಾರಿಗೆ ಸೇರಿದ ಸರ್ವಿಸ್ ರಿವಲ್ವಾರ್ ಪತ್ತೆಯಾಗಿದೆ.
ಇದು ಆತ್ಮಹತ್ಯೆ ಕೃತ್ಯ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಎಟಿಎಸ್‍ನ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin