ಭಯೋತ್ಪಾದನೆ ಪ್ರಚೋದಿಸುತ್ತಿರುವ ಪಾಕ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಗೆ ಅಫಾನಿಸ್ತಾನ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

mohmad-saikal
ವಿಶ್ವಸಂಸ್ಥೆ, ಜ.11- ಭಯೋ ತ್ಪಾದನೆಯನ್ನು ಪೋಷಿಸಿ, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ಥಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಆಫ್ಘಾನಿಸ್ಥಾನ, ಇಸ್ಲಾಮಬಾದ್‍ನ ಈ ಕುಕೃತ್ಯಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಆಗ್ರಹಿಸಿದೆ. ಆಫ್ಘಾನಿಸ್ಥಾನದಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತ, ದೇಶದಲ್ಲಿ ಅಶಾಂತಿಯನ್ನುಂಟುಮಾಡಲು ಪಾಕಿಸ್ಥಾನವು ಉಗ್ರಗಾಮಿ ಸಂಘಟನೆಗಳನ್ನು ಪ್ರಚೋದಿಸುತ್ತಿದೆ.

ವಿಶ್ವ ಸಮುದಾಯವು ಪಾಕಿಸ್ಥಾನದ ಈ ಕುತಂತ್ರವನ್ನು ಮಟ್ಟ ಹಾಕಬೇಕು.  ಭಯೋತ್ಪಾದಕ ಸಂಘಟನೆಗಳು ಆಫ್ಘನ್ ನೆಲದಲ್ಲಿ ನಿರಂತರವಾಗಿ ಭಯೋತ್ಪಾದನೆ ಕೃತ್ಯಗಳನ್ನು ನಡೆಸುತ್ತಿದ್ದು, ಪಾಕಿಸ್ಥಾನವು ಅವರಿಗೆ ರಾಜಕೀಯ, ಆರ್ಥಿಕ ಅಗತ್ಯ ವಸ್ತುಗಳು ಹಾಗೂ ಸಾರಿಗೆ ಸೌಲಭ್ಯಗಳನ್ನು ಕಲ್ಪಿಸಿ ಅವರನ್ನು ನೆರೆಯ ರಾಷ್ಟ್ರದೊಳಕ್ಕೆ ನುಗ್ಗಿಸುತ್ತಿದೆ. ಪಾಕಿಸ್ಥಾನ ಉಗ್ರರ ಸ್ವರ್ಗವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಫ್ಘಾನಿಸ್ಥಾನದ ವಿಶ್ವಸಂಸ್ಥೆ ಖಾಯಂ ಪ್ರತಿನಿ ಧಿ  ಮಹಮ್ಮೌದ್ ಶೈಕಾಲ್ ಒತ್ತಾಯಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin