ಭಯೋತ್ಪಾದನೆ ಮಟ್ಟ ಹಾಕಿ : ಪಾಕ್‍ಗೆ ಅಮೆರಿಕ ಗಂಭೀರ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

sdghfhahವಾಷಿಂಗ್ಟನ್, ಆ.5- ಭಾರತ ಸೇರಿದಂತೆ ನೆರೆಹೊರೆ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಆತಂಕ ಸೃಷ್ಟಿಸುತ್ತಿರುವ ದೇಶದೊಳಗಿನ ಎಲ್ಲ ಭಯೋತಾಪದನೆ  ಸಂಘಟನೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಅಮೆರಿಕ ಗಂಭೀರ ಎಚ್ಚರಿಕೆ ನೀಡಿದೆ. ಭಯೋತ್ಪಾದಕ ಬಣಗಳು ಕೇವಲ ಪಾಕಿಸ್ತಾನಕ್ಕೆ ಮಾತ್ರ ಉಪಟಳ ನೀಡುತ್ತಿಲ್ಲ. ಭಾರತ ಸೇರಿದಂತೆ ಅಕ್ಕಪಕ್ಕದ ದೇಶಗಳಿಗೂ ಆತಂಕ ಒಡ್ಡುತ್ತಿವೆ. ಪಾಕಿಸ್ತಾನ ಸರ್ಕಾರವು ಎಲ್ಲ ಉಗ್ರಗಾಮಿ ಸಂಘಟನೆಗಳನ್ನು ಮಟ್ಟ ಹಾಕಬೇಕು. ಆತಂಕವಾದಿಗಳ ಎಲ್ಲ ಸುರಕ್ಷಿತ ಸ್ವರ್ಗಗಳನ್ನು ಸಹ ಬಂದ್ ಮಾಡಬೇಕು ಎಂದು ಅಮೆರಿಕ ರಕ್ಷಣಾ ಇಲಾಖೆಯ ಉಪ ವಕ್ತಾರ ಮಾರ್ಕ್ ಟೋನರ್ ಸ್ಪಷ್ಟ ಮಾತುಗಳಲ್ಲಿ ತಾಕೀತು ಮಾಡಿದ್ದಾರೆ.

ಏಷ್ಯಾ ಪ್ರಾಂತ್ಯದಲ್ಲಿ ದೀರ್ಘಕಾಲದ ಭದ್ರತೆ ಆತಂಕವೊಡ್ಡಿದ್ದ ಎಲ್ಲ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಆಫ್ಘಾನಿಸ್ತಾನದೊಂದಿಗೆ ನಿಕಟ ಭಯೋತ್ಪಾದನೆ ನಿಗ್ರಹ ಸಹಕಾರದೊಂದಿಗೆ ಅಗತ್ಯವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾವು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin