ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕ್ ಸಿದ್ಧ : ನವಾಜ್ ಷರೀಫ್

ಈ ಸುದ್ದಿಯನ್ನು ಶೇರ್ ಮಾಡಿ

gSGHSGFGಇಸ್ಲಾಮಾಬಾದ್ :  ಭಯೋತ್ಪಾದನೆ ವಿರುದ್ಧ ಹೋರಾಡಲು ಪಾಕ್, ಸಾರ್ಕ್ ರಾಷ್ಟ್ರಗಳ ಜತೆ ಕೈಜೋಡಿಸಲಿದೆ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಗುಡುಗಿದರು. ಇಸ್ಲಾಮಾಬಾದ್‍ನಲ್ಲಿ ನಡೆದ ಸಾರ್ಕ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಭಯೋತ್ಪಾದನೆ ಸಮಸ್ಯ ತೀವ್ರವಾಗುತ್ತಿದೆ. ಇದರ ವಿರುದ್ಧ ಹೋರಾಡಲು ಪಾಕ್, ಸಾರ್ಕ್ ರಾಷ್ಟ್ರಗಳ ಜತೆ ಕೈ ಜೋಡಿಲಿದೆ ಎಂದರು.   ದೇಶದಲ್ಲಿ ತಾಂಡವಾಡುತ್ತಿರುವ ಭಯೋತ್ಪಾದನೆ ಪಿಡುಗನ್ನು ದೇಶದಿಂದ ಕಿತ್ಯೊಗೆಯಲು ಪಾಕ್ ಪಣ ತೊಟ್ಟಿದೆ, ತನ್ನ ನೆಲದಲ್ಲಿ ಉಗ್ರ ಚಟುವಟಿಕೆಗಳ ದಮನ ಮಾಡುತ್ತೇವೆ ಎಂದು ಹೇಳಿದರು. ‘ಶಾಂತಿಯೇ ಅಭಿವೃದ್ಧಿ, ನೆರೆಹೊರೆ ರಾಷ್ಟಗಳ ಜತೆ ಶಾಂತಿಯೇ ನಮ್ಮ ಸರ್ಕಾರದ  ಮಂತ್ರ ಎಂದು ಷರೀಪ್ ಪಠಿಸಿದರು.

ದೇಶದಲ್ಲಿ ನಡೆಯಲಿರುವ ಸಮಾವೇಶಗಳಲ್ಲಿ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ, ಭಾರತ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಇಟ್ಟುಕೊಳುತ್ತೇವೆ ನಮ್ಮ ಗುರಿ ಎಂದು ಅವರು ತಿಳಿಸಿದರು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin