ಭಾಗ್ಯಗಳ ಜತೆ ನೀರಿನ ಸೌಭಾಗ್ಯವನ್ನೂ ಕೊಡಿ

ಈ ಸುದ್ದಿಯನ್ನು ಶೇರ್ ಮಾಡಿ

KAVERY7

ಭವಿಷ್ಯದಲ್ಲಿ ನೀರಿಗೆ ಬರ ಬರುವುದಂತೂ ಖಚಿತ. ಈ ವಿಷಯದಲ್ಲಿ ಸಾರ್ವಜನಿಕರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನೀರಿನ ಮಿತ ಬಳಕೆ ಅತ್ಯಗತ್ಯ. ರೈತರು ಕೂಡ ಬೆಳೆಗಳನ್ನು ಬಿತ್ತನೆ ಮಾಡುವಾಗ ನೀರಿನ ಸಂಗ್ರಹ ನೋಡಿಕೊಂಡು ಮುಂದುವರಿಯಬೇಕು. ಆಗ ನೀರಿನ ಖರ್ಚು ಕಡಿಮೆಯಾಗಿ ಉಳಿತಾಯವಾಗುತ್ತದೆ. ಇದರಿಂದ ಎಲ್ಲರಿಗೂ ಅನುಕೂಲ.

ಪ್ರಪಂಚದಲ್ಲಿ ಮೂರನೇ ಮಹಾಯುದ್ಧವೇನಾದರೂ ನಡೆದರೆ ಅದು ನೀರಿಗಾಗಿ ಎಂದು ಅನೇಕ ತಜ್ಞರು ಕಳೆದ ಕೆಲವು ವರ್ಷಗಳಿಂದಲೂ ಬಂಬಡ ಬಾರಿಸುತ್ತಿದ್ದಾರೆ. ಅಂದರೆ ನೀರಿಗೆ ತೀವ್ರ ಬರ ಬರಲಿದೆ ಎಂದು ಅದರ ಅರ್ಥ. ತಜ್ಞರು ಹೇಳುತ್ತಿರುವ ಈ `ವಿಶ್ವ’ದಲ್ಲಿ ಕರ್ನಾಟಕವೂ ಇದೆ ಎಂಬ ಸಾಮಾನ್ಯ ತಿಳುವಳಿಕೆಯೂ ನಮ್ಮ ನಾಯಕರಿಗೆ ಇಲ್ಲವೆ…?
ಹಾನಿ ಹಾನಿ ಹಾನಿ..:

ಪ್ರಪಂಚದಲ್ಲಿ ಇನ್ನೂ ಮುಂದೆ ನೀರಿಗೆ ಅಂತಹ ಬಿಕ್ಕಟ್ಟು ಉಂಟಾಗಲಿದೆ ಎಂದು ಭವಿಷ್ಯ ನುಡಿದಿದ್ದರೆ, ನಮ್ಮ ಕರ್ನಾಟಕದಲ್ಲಿ ಈಗಾಗಲೇ ಆ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಅದರ ಫಲವೇ ಪ್ರಸ್ತುತ ನಡೆಯುತ್ತಿರುವ ಮಹದಾಯಿ, ಕಾವೇರಿ ಸಂಘರ್ಷಗಳು. ಮಹದಾಯಿ ಹೋರಾಟಕ್ಕೀಗ ಎರಡು ವರ್ಷಗಳ ಹರೆಯ. ಆ ಹೋರಾಟದಲ್ಲಿ ಜೀವ ಹಾನಿ, ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ, ಪ್ರತಿಭಟನೆ ಮುಂದುವರೆದಿದೆ.
ಇನ್ನು ಕಾವೇರಿ ಗಲಾಟೆಗೆ ಒಂದೆರಡು ಜೀವಗಳ ಬಲಿ, ಸಾವಿರಾರು ಕೋಟಿ ರೂ. ಆಸ್ತಿ ಹಾನಿ, ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಸಾಕಷ್ಟು ಜಲ ಸಂಪನ್ಮೂಲಗಳಿದ್ದರೂ ಹನಿ ನೀರು ಸಿಕ್ಕದೆ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ.

ಅತಿಹೆಚ್ಚು ನೀರಿನ ಮೂಲ(ನದಿ-ಹಳ್ಳ)ಗಳನ್ನು ಹೊಂದಿರುವ ರಾಜ್ಯ ಕರ್ನಾಟಕ ! ಸಣ್ಣ-ಪುಟ್ಟ ನದಿ ಗಳನ್ನು ಬಿಟ್ಟು 20ಕ್ಕೂ ಹೆಚ್ಚು ಪ್ರಮುಖ ನದಿಗಳಿವೆ. , ಈ ನದಿಗಳು ರಾಜ್ಯಾದ್ಯಂತ ಒಟ್ಟಾರೆ ಸುಮಾರು 5000 ಕಿ.ಮೀ ಹರಿಯುತ್ತವೆ. ಇಷ್ಟು ನದಿಗಳಿದ್ದರೂ ದೊಡ್ಡ ಡ್ಯಾಮ್‍ಗಳಿರುವುದು ಐದೇ. ಕೃಷ್ಣರಾಜಸಾಗರ, ವಾಣಿ ವಿಲಾಸ ಸಾಗರ, ಆಲಮಟ್ಟಿ , ತುಂಗಭದ್ರಾ, ಭದ್ರಾ ಇಷ್ಟೇ ಅಲ್ಲದೆ ಇನ್ನೂ ಹಲವು ಅಣೆಕಟ್ಟೆಗಳೂ ಇವೆ.  ಅತ್ಯಂತ ಹೆಚ್ಚು ಮಳೆ ಬೀಳುವ ಕರ್ನಾಟಕದ ಚಿರಾಪುಂಜಿ ಆಗುಂಬೆಯೂ ಇದೆ. ಪಶ್ಚಿಮ ಘಟ್ಟಗಳಿವೆ. ಕರ್ನಾಟಕದಲ್ಲಿ ಸುರಿಯುವ ಮಳೆ ನೀರನ್ನೆಲ್ಲ ಶೇಖರಿಸಿದರೆ ಇಡೀ ದೇಶಕ್ಕೇ ಹಂಚಬಹುದು.    -ಚಿಕ್ಕರಸು

 

► Follow us on –  Facebook / Twitter  / Google+

Facebook Comments

Sri Raghav

Admin