ಭಾಗ್ಯಲಕ್ಷ್ಮೀ ಬಾಂಡ್ ಹೆಣ್ಣು ಮಗುವಿಗೆ ವರದಾನ

ಈ ಸುದ್ದಿಯನ್ನು ಶೇರ್ ಮಾಡಿ

BHAGYALAKSHMI

ಗೌರಿಬಿದನೂರು,ಆ.31- ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣುಮಗುವಿನ ಮೇಲೆ ಕೀಳಿರಿಮೆ ಇದ್ದುಅದನ್ನು ಹೋಲಾಡಿಸಲು ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಬಾಗ್ಯಲಕ್ಷ್ಮೀ ಬಾಂಡ್‍ಯೋಜನೆ ಹೆಣ್ಣು ಮಗುವಿನ ಪಾಲಿಗೆ ವರದಾನವಾಗಿದೆಎಂದುಉಪಸಭಾದ್ಯಕ್ಷ ಎನ್. ಹೆಚ್. ಶಿವಶಂಕರರೆಡ್ಡಿ ಹೇಳಿದರು.ತಾಲೂಕಿನ ಶಾಸಕರ ಸ್ವಗ್ರಾಮ ಹೆಚ್ ನಾಗಸಂದ್ರದಲ್ಲಿದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಸರಕಾರ ಹೆಣ್ಣು ಮಕ್ಕಳಿಗಾಗಿ ಉಚಿತ ವಿದ್ಯಾರ್ಥಿ ನಿಲಯ, ಶಿಕ್ಷಣ, ಹೆಣ್ಣು ಮಗು ಹುಟ್ಟಿದ ಕೂಡಲೇ ಒಂದು ಲಕ್ಷ ಬೆಲೆ ಬಾಳುವ

ಬಾಂಡ್ ವಿತರಿಸಿ ಅವರ ಶಿಕ್ಷಣಕ್ಕೆ ಸರಕಾರ ಕೈಜೋಡಿಸುತ್ತಿದೆ. ಪೊಷಕರೂ ಸಹ ಹೆಣ್ಣು ಮಗುವಿನ ಮೇಲೆ ಅಸಡ್ಡೆ ತೋರದೆ ಉನ್ನತ ಶಿಕ್ಷಣ ನೀಡಿ ಅದಕ್ಕೆ ಆಸರೆಯಾಗಿ ನಿಲ್ಲಬೇಕೆಂದು ತಿಳಿಸಿದರು.  ಸಿಡಿಪಿಒ ರಾಜೇಂದ್ರ ಪ್ರಸಾದ್ ಮಾತನಾಡಿ, ಬಾಲ್ಯ ವಿವಾಹ ಮಾಡಬಾರದು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕರಾದ ಸರೋಜಮ್ಮ, ತಾಯವ್ವ, ಆಶಾ ಕಾರ್ಯಕರ್ತೆಯರು ಮುಂತಾದವರು ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin