ಭಾರತಕ್ಕೆ ಕೌಂಟರ್ ಕೊಡಲು ಪಾಕ್ ತಯಾರಿ, ಪರ್ಯಾಯ ಸಾರ್ಕ್ ರಚನೆಗೆ ಷಡ್ಯಂತ್ರ
ಈ ಸುದ್ದಿಯನ್ನು ಶೇರ್ ಮಾಡಿ
ವಾಷಿಂಗ್ಟನ್, ಅ.12- ಎಂಟು ಸದಸ್ಯ ರಾಷ್ಟ್ರಗಳ ಸಾರ್ಕ್ (ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋ-ಆಪರೇಷನ್) ಮೇಲೆ ನಿಯಂತ್ರಣ ಸಾಧಿಸಿರುವ ಭಾರತಕ್ಕೆ ಸಡ್ಡು ಹೊಡೆಯಲು ಪಾಕಿಸ್ತಾನ ಪ್ರತಿತಂತ್ರ ರೂಪಿಸಿದೆ. ಸಾರ್ಕ್ಗೆ ಪರ್ಯಾಯವಾಗಿ ಗ್ರೇಟರ್ ಸೌತ್ ಏಷ್ಯನ್ ಎಕೋನಾಮಿಕ್ ಅಲೆಯನ್ಸ್ (ದಕ್ಷಿಣ ಏಷ್ಯಾ ಆರ್ಥಿಕ ಮಿತ್ರಕೂಟ) ರಚನೆಯ ಎಲ್ಲ ಸಾಧ್ಯತೆಗಳ ಬಗ್ಗೆ ಪಾಕ್ ಪರಿಶೀಲಿಸುತ್ತಿದೆ. ಈಗಾಗಲೇ ನ್ಯೂಯಾರ್ಕ್ನಲ್ಲಿರುವ ಪಾಕಿಸ್ತಾನದ ಸಂಸದೀಯ ನಿಯೋಗವು, ಈ ಹೊಸ ಸಂಘಟನೆಗೆ ವೇದಿಕೆ ಸಜ್ಜುಗೊಳಿಸಿದೆ ಎಂದು ಡಾನ್ ಪತ್ರಿಕೆಯ ಆನ್ಲೈನ್ ವರದಿ ಹೇಳಿದೆ.
ಗ್ರೇಟರ್ ಸೌತ್ ಏಷ್ಯಾ ಈಗಾಗಲೇ ಹೊರಹೊಮ್ಮುತ್ತಿದೆ ಎಂದು ಸಂಸದ ಮುಷಾಹಿದ್ ಹುಸೇನ್ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಈ ಗ್ರೇಟರ್ ಸೌತ್ ಏಷ್ಯಾದಲ್ಲಿ ಚೀನಾ, ಇರಾನ್ ಮತ್ತು ಕೇಂದ್ರ ಏಷ್ಯಾದ ನೆರೆಹೊರೆ ಗಣರಾಜ್ಯಗಳು ಸೇರಲಿವೆ ಎಂದು ಅವರು ಹೇಳಿದ್ದಾರೆ.
► Follow us on – Facebook / Twitter / Google+
Facebook Comments