ನ್ಯೂಜಿಲ್ಯಾಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್ ಗಳ ಜಯ

ಈ ಸುದ್ದಿಯನ್ನು ಶೇರ್ ಮಾಡಿ

Shikhar--1

ಪುಣೆ. ಅ.25 : ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ಪುಣೆಯಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ 6 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 230 ರನ್ ಗಳಿಸಿ ಭಾರತಕ್ಕೆ 231 ರನ್ ಗಳ ಸರಳ ಗುರಿಯನ್ನು ನೀಡಿತು.

231 ರನ್ ಗಳ ಸವಾಲನ್ನು ಬೆನ್ನಟ್ಟಿದ ಭಾರತ ಶಿಖರ್ ಧವನ್ ಮತ್ತು ದಿನೇಶ್ ಕಾರ್ತಿಕ್ ಅವರ ಅರ್ಧಶತಕಗಳ ನೆರವಿನಲ್ಲಿ 46 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 232 ರನ್ ಗಳಿಸಿ ಗೆಲುವು ದಾಖಲಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿ 1-1 ಗೆಲುವಿನೊಂದಿಗೆ ಸಮಬಲಗೊಂಡಿದೆ. ದಿನೇಶ್ ಕಾರ್ತಿಕ್ ಔಟಾಗದೆ 64 ರನ್, ಕೊಹ್ಲಿ 29, ಧೋನಿ ಔಟಾಗದೆ 18 ರನ್, ಹಾರ್ದಿಕ್ ಪಾಂಡೆ 30 ರನ್ ಗಳಿಸಿದರು.

 

ಸ್ಕೋರ್ ವಿವರ : 

ನ್ಯೂಜಿಲ್ಯಾಂಡ್ 230/9 ( 50 ಓವರ್ ಗಳು)
ಭಾರತ : 232/4 (46.0 Ovs)

cricket

Facebook Comments

Sri Raghav

Admin