ಭಾರತದಲ್ಲಿವೇ 1,900 ರಾಜಕೀಯ ಪಕ್ಷಗಳು, ಇವುಗಳಲ್ಲಿ 400 ಪಕ್ಷಗಳು ಚುನಾವಣೆಗಳನ್ನೇ ಎದುರಿಸಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Political-Parties-01

ನವದೆಹಲಿ, ಡಿ. 15-ವಿಶ್ವದಲ್ಲಿ ಅತ್ಯಂತ ಹೆಚ್ಚು ರಾಜಕೀಯ ಪಕ್ಷಗಳನ್ನು ಹೊಂದಿರುವ ದೇಶ ಯಾವುದು? ಅನುಮಾನವೇ ಬೇಡ, ಅದು ಭಾರತ. ಅನೇಕತೆಯಲ್ಲಿ ಏಕತೆಯಂತಿರುವ, ಮಿನಿ ವಿಶ್ವದ ಸ್ವರೂಪವಾಗಿರುವ ಭಾರತದಲ್ಲಿ 1,900ಕ್ಕೂ ಹೆಚ್ಚು ರಾಜಕೀಯ ಪಕ್ಷಗಳಿವೆ. ಇವುಗಳಲ್ಲಿ 400 ಪೊಲಿಟಿಕಲ್ ಪಾರ್ಟಿಗಳು ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಿಲ್ಲ.  ಈ ಸಂಗತಿಯನ್ನು ಸ್ವತ: ಮುಖ್ಯ ಚುನಾವಣಾ ಆಯುಕ್ತ ನಾಸೀಂ ಜೈದಿ ತಿಳಿಸಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಹಿಂದಿನಿಂದಲೂ ಕಪ್ಪು ಹಣವನ್ನು ಬಿಳಿ ಮಾಡುವ ದಂಧೆಯಲ್ಲಿ ತೊಡಗಿರುವ ಬಗ್ಗೆ ಅವರು ಅವರು ಗುಮಾನಿ ವ್ಯಕ್ತಪಡಿಸಿದ್ದಾರೆ.

ದೇಣಿಗೆಗಳು, ವಂತಿಕೆಗಳು ಮತ್ತು ಹಣಕಾಸು ಸಹಾಯದ ಮೇಲೆ ಇವುಗಳು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯುತ್ತಿವೆ. ಇನ್ನೊಂದಡೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿವೆ. ಇವೆಲ್ಲವನ್ನೂ ಗಣನೆಗೆ ಚುನಾವಣಾ ಆಯೋಗ ಗಣನೆಗೆ ತೆಗೆದುಕೊಂಡಿದೆ. ಇಷ್ಟು ಸಂಖ್ಯೆಯ ರಾಜಕೀಯ ಪಕ್ಷಗಳ ದೊಡ್ಡ ಪಟ್ಟಿಯನ್ನು ಮುಂದಿಟ್ಟುಕೊಂಡಿರುವ ಚುನಾವಣಾ ಆಯೋಗವು ಇಂಥ ಕೆಲವು ಪಾರ್ಟಿಗಳ ಮಾನ್ಯತೆ ರದ್ದುಗೊಳಿಸಲು ಸಜ್ಜಾಗಿದೆ.

Eesanje News App

 

Facebook Comments

Sri Raghav

Admin