ಭಾರತದಲ್ಲಿ ಇದೇ ಮೊದಲ ಬಾರಿಗೆ ಆಸ್ಟನ್ ಮಾರ್ಟಿನ್‍ನ ಹೊಸ ಬ್ರಾಂಡ್ ಡಿಬಿ-11 ಕಾರು ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

DB11

ಬೆಂಗಳೂರು, ಅ.22- ಜಗದ್ವಿಖ್ಯಾತ ಕಾರು ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಆಸ್ಟನ್ ಮಾರ್ಟಿನ್ ತನ್ನ ಹೊಚ್ಚ ಹೊಸ ಮಾದರಿಯ ಕಾರನ್ನು ಪ್ರಸ್ತುತಪಡಿಸಿದೆ. ಆಸ್ಟನ್ ಮಾರ್ಟಿನ್-ಮುಂಬೈ ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಬಿ11 ಕಾರನ್ನು ಬಿಡುಗಡೆಗೊಳಿಸಿದ್ದು, ಆಟೋಮೊಬೈಲ್ ಪ್ರಿಯರನ್ನು ಬಹುವಾಗಿ ಆಕರ್ಷಿಸಿದೆ.  ಈ ವರ್ಷದ ಆರಂಭದಲ್ಲಿ ನಡೆದ 86ನೇ ಅಂತಾರಾಷ್ಟ್ರೀಯ ಜಿನಿವಾ ಮೋಟಾರ್ ಶೋನಲ್ಲಿ ಆಸ್ಟನ್ ಮಾರ್ಟಿನ್ ಡಿಬಿ11 ಕಾರನ್ನು ಜಗತ್ತಿನ ಆಟೋಮೊಬೈಲ್ ಕ್ಷೇತ್ರಕ್ಕೆ ಪರಿಚಯಿಸಲಾಗಿತ್ತು. ಅಂದಿನಿಂದ ವಿಶ್ವಾದಾದ್ಯಂತ ಹೊಸ ಮಾದರಿ ಈ ವಾಹನಕ್ಕೆ ಅಪಾರ ಬೇಡಿಕೆ ಬರುತ್ತಿದೆ.

ಭಾರತದಲ್ಲಿ ಡಿಬಿ11 ಕಾರನ್ನು ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸಲಾಗಿದೆ. ಮುಂಬೈ, ಪುಣೆ, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಮಹಾನಗರಗಳಲ್ಲಿ ವಿನೂತನ ರೋಡ್ ಶೋ ಮೂಲಕ ಈ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು.  ಹೊಸ ಪರಿಕಲ್ಪನೆಯ ವಿಭಿನ್ನ ವಿನ್ಯಾಸ ಹಾಗೂ ಏರೋಡೈನಾಮಿಕ್ ಮಾದರಿ ಹೊಂದಿರುವ ಡಿಬಿ11 ಕಾರು 5.2 ಲೀಟರ್ ಟ್ವೀನ್ ಟರ್ಬೋಚೇಂಜ್ಡ್ ವಿ12 ಎಂಜಿನ್ ಹೊಂದಿದೆ. ಹಗುರ ಆದರೆ ಸದೃಢ ಕವಚ ಒಳಗೊಂಡ ಈ ಕಾರು ಹಿಂದಿನ ಡಿಬಿ ಸರಣಿ ಕಾರುಗಳಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವಿಶ್ವದ ಅತ್ಯಂತ ಸುಂದರ ಕಾರುಗಳಲ್ಲಿ ಒಂದಾಗಿ ಡಿಬಿ11 ನಿರ್ಮಾಣವಾಗಿದೆ. ವಿಶಿಷ್ಟ ವಿನ್ಯಾಸ ಮತ್ತು ಉತ್ಕøಷ್ಟ ತಂತ್ರಜ್ಞಾನಗಳ ಸಂಯೋಜನೆಯಾದ ಈ ಮಾದರಿಯನ್ನು ಯುವ ಜನಾಂಗದ ಹೊಸ ಅಭಿರುಚಿಗೆ ಅನುಗುಣವಾಗಿ ಎಸ್‍ಯುವಿ (ಸ್ಪೋಟ್ರ್ಸ್ ಯುಟಿಲಿಟಿ ವೆಹಿಕಲ್) ಸ್ಪರ್ಶ ನೀಡಿ ರೂಪಿಲಾಗಿದೆ ಎಂದು ಆಸ್ಟನ್ ಮಾರ್ಟಿನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆ್ಯಂಡಿ ಪಲ್ಮರ್ ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin