ಭಾರತದಲ್ಲಿ ಏಕಾಂಗಿಯಾಗಿ ದಾಳಿ ಮಾಡಲು ಸಜ್ಜಾಗಿದ್ದ ಐಎಸ್’ಐಎಸ್ ಉಗ್ರನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Attack-01

ನವದೆಹಲಿ, ಅ.8-ಭಾರತದ ವಿವಿಧ ನಗರಗಳ ಮೇಲೆ ಭಯೋತ್ಪಾದಕರು ವಿಧ್ವಂಸಕ ಕೃತ್ಯಗಳನ್ನು ನಡೆಸಲಿದ್ದಾರೆ ಎಂಬ ಗುಪ್ತಚರ ಮಾಹಿತಿಗಳು ಎಚ್ಚರಿಕೆ ನೀಡಿರುವಾಗಲೇ ಅನೇಕ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ವಿಶ್ವದ ಅತ್ಯುಗ್ರ ಭಯೋತ್ಪಾದನೆ ಸಂಘಟನೆ ಇಸ್ಲಾಮಿಕ್ ಸ್ಟೇಟ್‍ನಿಂದ ತರಬೇತಿ ಪಡೆದಿದ್ದ ಸುಬಾಹನಿ ಹಾಜಾ ಮೊಹಿದೀನ್ ಎಂಬ ಉಗ್ರಗಾಮಿ ಭಾರತದ ಕೆಲವೆಡೆ ಭಯಾನಕ ಏಕಾಂಗಿ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ ಸಂಗತಿ ಇದೀಗ ಆತನ ಬಂಧನದಿಂದ ಬಯಲಾಗಿದೆ.  ನಿಖರ ಮಾಹಿತಿ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಈತನನ್ನು ಕಳೆದ ಮೂರು ದಿನಗಳ ಹಿಂದೆ ಚೆನ್ನೈನಲ್ಲಿ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅನೇಕ ಗಂಡಾಂತರಕಾರಿ ಸಂಗತಿಗಳು ಬಯಲಾದವು,
ಅತ್ಯಂತ ಕ್ರೂರ ಭಯೋತ್ಪಾದನೆ ಬಣವಾದ ಐಎಸ್‍ನ ಮಿಲಿಟರಿ ಘಟಕದಲ್ಲಿ ನುರಿತ ತರಬೇತಿ ಪಡೆದಿದ್ದ ಮೊಯಿದೀನ್ ಕಳೆದ ಸೆಪ್ಟೆಂಬರ್‍ನಲ್ಲಿ ಭಾರತಕ್ಕೆ ಹಿಂದಿರುಗಿದ್ದ. ಐಎಸ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಆತ, ಭಾರತದಲ್ಲಿ ಯಾವ ರೀತಿ ಬುಡಮೇಲು ಕುಕೃತ್ಯಗಳನ್ನು ನಡೆಸಬೇಕು ಎಂಬ ಬಗ್ಗೆ ಇಂಟರ್‍ನೆಟ್‍ನಲ್ಲಿ ಚರ್ಚಿಸಿ ದೊಡ್ಡ ಮಟ್ಟದ ಯೋಜನೆಯನ್ನೂ ರೂಪಿಸಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಲೋನ್ ವುಲ್ಫ್ ಮಾದರಿಯಲ್ಲಿ (ಏಕಾಂಗಿ ದಾಳಿ) ವಿಧ್ವಂಸಕ ಕೃತ್ಯ ಎಸಗುವುದು ಈತನ ಪರಮ ಉದ್ದೇಶವಾಗಿತ್ತು. ಜಗತ್ತಿನ ವಿವಿಧೆಡೆ ಐಎಸ್‍ಐಎಸ್‍ನ ಚಟುವಟಿಕೆಗಳನ್ನು ಆತನ ಅನುಸರಿಸುತ್ತಿದ್ದ. ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈತ ಯಾರ ಗಮನಕ್ಕೂ ಒಳಗಾಗಿರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಈತನ ಚಲನವಲಯಗಳು ರೇಡಾರ್‍ನಲ್ಲಿ ಪತ್ತೆಯಾಗಿತ್ತು. ಯಾವುದೇ ರೀತಿಯ ಭಯಾನಕ ಕೃತ್ಯಗಳನ್ನು ನಡೆಸಲು ಸನ್ನದ್ಧನಾಗಿದ್ದ ಈತ ಅತ್ಯಂತ ಅಪಾಯಕಾರಿ ಏಕಾಂಗಿ ದಾಳಿಕೋರನಾಗಿದ್ದ ಎಂಬ ಗಂಡಾಂತರ ಅಂಶವನ್ನು ಎನ್‍ಐಎ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈತನ ಬಂಧನದಿಂದ ಮುಂದೆ ಆಗಬಹುದಾಗಿ ಭಾರೀ ಪ್ರಮಾದ ತಪ್ಪಿದಂತಾಗಿದೆ. ತನ್ನ ಉದ್ದೇಶಿತ ದಾಳಿ ಮೂಲಕ ಪ್ರಥಮ ಏಕಾಂಗಿ ಆಕ್ರಮಣಕಾರಿ ಆಗಲಿದ್ದ ಸಂಗತಿ ಸಹ ಬಯಲಾಗಿದೆ.

ಮೊಯಿದೀನ್ ಬಂಧನಕ್ಕೂ ಮುನ್ನ ಅಧಿಕಾರಿಗಳು ಮಹಮದ್ ಮಸಿಯುದ್ದೀನ್ ಅಲಿಯಾಸ್ ಅಬು ಮುಸಾ ಎಂಬ ಏಕಾಂಗಿ ದಾಳಿಕೋರನನ್ನು ಬಂಧಿಸಿದ್ದರು. ಶ್ರೀನಗರ ಮತ್ತು ಕೊಲ್ಕತದಲ್ಲಿ ಏಕಾಂಗಿ ದಾಳಿಗಳನ್ನು ನಡೆಸುವ ಈತನ ಭಯಾನಕ ಕೃತ್ಯವನ್ನು ವಿಫಲಗೊಳಿಸಲಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin