ಭಾರತದಲ್ಲಿ ರೇಡಿಯಲ್ ಮೋಟಾರ್ ಸೈಕಲ್ ಟೈರ್‍ಗಳ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Metro

ನವದೆಹಲಿ, ಸೆ.8- ದ್ವಿಚಕ್ರ ವಾಹನಗಳಿಗೆ ಅತ್ಯುತ್ಕøಷ್ಟ ಗುಣಮಟ್ಟದ ಟೈರ್‍ಗಳನ್ನು ಒದಗಿಸುವ ತನ್ನ ಶ್ರೀಮಂತ ಪರಂಪರೆಯನ್ನು ಮೆಟ್ರೊ ಟೈರ್ಸ್ ಭಾರತದಲ್ಲಿ ಮುಂದುವರೆಸಿದ್ದು,ದ್ವಿಚಕ್ರ ವಾಹನಗಳಿಗೆ ಅಗತ್ಯವಿರುವಂತಹ ರೇಡಿಯಲ್ ಮೋಟಾರ್‍ಸೈಕಲ್ ಟೈರ್ ತಯಾರಿಕೆ ಆರಂಭಿಸುವ ಮೂಲಕ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿದೆ ಎಂದು ಮೆಟ್ರೊ ಟೈರ್ಸ್‍ನ ವ್ಯವಸ್ಥಾಪಕ ನಿರ್ದೇಶಕ ರಮ್ಮಿ ಛಾಬ್ರಾ ತಿಳಿಸಿದರು. ಹೊಸ ಮೆಟ್ರೊ ರೇಡಿಯಲ್ ಮೋಟಾರ್‍ಸೈಕಲ್ ಟೈರ್‍ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಹೊಸ ಟೈರ್‍ಗಳನ್ನು ಪಂಜಾಬ್‍ನ ಕಂಪನಿಯ ಅತ್ಯಾಧುನಿಕ ಸಂಶೋಧನಾ ಅಭಿವೃದ್ಧಿ ಘಟಕದಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಶ್ರೇಣಿಯ ಟೈರ್‍ಗಳ ತಯಾರಿಕೆಗಾಗಿ ಕಂಪನಿ ತನ್ನ ಉತ್ಪಾದನಾ ಘಟಕ, ಸಾಮಥ್ರ್ಯ ವಿಸ್ತರಣೆ ಹಾಗೂ ಭವಿಷ್ಯದ ಆರ್‍ಡಿ ಸೌಲಭ್ಯಗಳ ಸೇರ್ಪಡೆಗಾಗಿ ರೂ.300 ಕೋಟಿಗಳನ್ನು ಹೂಡಿಕೆ ಮಾಡಿದೆ ಎಂದರು.

ಈ ಹೊಸ, ವಿಶೇಷ ಟೈರ್‍ಗಳು 150 ಸಿಸಿ ಸಾಮಥ್ರ್ಯದ ದ್ವಿಚಕ್ರ ವಾಹನಗಳಿಂದ ಹಿಡಿದು 200-250 ಸಿಸಿ ಸಾಮಥ್ರ್ಯದ ಮಧ್ಯಮ ತೂಕದ ಕ್ರೀಡಾ ಮೋಟಾರ್‍ಸೈಕಲ್‍ಗಳ ವರ್ಗದವರೆಗೂ ವೈವಿಧ್ಯಮಯ ಟೈರ್‍ಗಳ ಸರಣಿಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು. ಮೆಟ್ರೊದ ಹೊಸ ರೇಡಿಯಲ್ ಮೋಟಾರ್‍ಸೈಕಲ್ ಟೈರ್‍ಗಳು ಹೆಚ್ಚುವರಿ ಫ್ಲೆಕ್ಸಿಬಲ್ ಸೈಡ್‍ವಾಲ್ ಹೊಂದಿದ್ದು, ಹೆಚ್ಚು ಕಠಿಣವಾಗಿದೆ. ಇದರಿಂದಾಗಿ ಹೆಚ್ಚು ಆರಾಮದಾಯಕ ಸವಾರಿ ಅನುಭವ ಹಾಗೂ ಉತ್ತಮ ಮೈಲೇಜ್ ದೊರೆಯುತ್ತದೆ. ಗಟ್ಟಿಯಾದ ಟೈರ್‍ನ ಹೊರ ಮೈ, ಚಕ್ರದ ಉರುಳುವಿಕೆಯ ಪ್ರತಿರೋಧವನ್ನು ಕಡಿಮೆಗೊಳಿಸುತ್ತದೆ ಹಾಗೂ ಈ ಪ್ರಕಾರ ವಾಹನದ ಇಂಧನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಮೆಟ್ರೊ ರೇಡಿಯಲ್ ಮೋಟಾರ್‍ಸೈಕಲ್ ಟೈರ್‍ಗಳ ಫ್ಲಾಟರ್ ಟ್ರೆಡ್ ರೇಡಿಯಸ್, ಚಕ್ರ ಉರುಳಿದಾಗ, ಭೂಮಿಯೊಂದಿಗೆ ಹೆಚ್ಚು ವಿಸ್ತಾರವಾದ ಸಂಪರ್ಕವನ್ನು ಕಲ್ಪಿಸುತ್ತದೆ ಹಾಗೂ ಉತ್ತಮ ಸ್ಥಿರತೆ ಹಾಗೂ ಹೆಚ್ಚು ವೇಗದಲ್ಲಿ ಚಲಿಸುವಾಗ ಹೆಚ್ಚುವರಿ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ. ಈ ಹೊಸ ವಿಶೇಷ ಟೈರ್‍ಗಳು ದೇಶದಾದ್ಯಂತ ಕಂಪನಿಯ ಆಯ್ದ ಡೀಲರ್‍ಗಳ ಬಳಿ ಈ ಕ್ಷಣದಿಂದಲೇ ಮಾರಾಟಕ್ಕೆ ಲಭ್ಯವಿದೆ.

► Follow us on –  Facebook / Twitter  / Google+

Facebook Comments

Sri Raghav

Admin