ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಕರಾಚಿಯಲ್ಲಿ ಜಿಹಾದಿಗಳ ಸಂಚು, ಪಾಕ್ ಸೇನೆಯಿಂದಲೇ ಕುಮ್ಮಕ್ಕು..!

ಈ ಸುದ್ದಿಯನ್ನು ಶೇರ್ ಮಾಡಿ

Jihadi--01

ನವದೆಹಲಿ, ಫೆ.17-ಭಾರತದ ವಿರುದ್ಧ ಭಯೋತ್ಪಾದನೆ ಚಟುವಟಿಕೆಗಳನ್ನು ನಡೆಸುವ ಜಿಹಾದಿ ಗುಂಪುಗಳು ಮತ್ತು ಕ್ರಿಮಿನಲ್‍ಗಳಿಗೆ ಪಾಕಿಸ್ತಾನದ ಬಂದರು ನಗರಿ ಕರಾಚಿಯೇ ಕಾರಸ್ಥಾನವಾಗಿದ್ದು, ಇದಕ್ಕೆ ಪಾಕ್ ಸೇನೆಯೇ ಕುಮ್ಮಕ್ಕು ನೀಡುತ್ತಿದೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗಗೊಂಡಿದೆ.  ಬೆಲ್ಜಿಯಂ ರಾಜಧಾನಿ ಬ್ರುಸ್ಸೆಲ್ಸ್ ಮೂಲಕ ಥಿಂಕ್ ಟ್ಯಾಂಕ್ (ಚಿಂತಕರ ಛಾವಡಿ) ಇಂಟರ್‍ನ್ಯಾಷನಲ್ ಕ್ರೈಸಿಸ್ ಗ್ರೂಪ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.  ಲಷ್ಕರ್-ಎ-ತೊಯಿಬಾ, ಅದರ ಮಾತೃ ಸಂಸ್ಥೆ ಜಮಾತ್-ಉದ್-ದವಾ, ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಷ್-ಎ-ಮಹಮದ್ ಮತ್ತು ಶಿಯಾ ವಿರೋ ಬಣ ಲಷ್ಕರ್-ಎ-ಜಾಂಗ್ವಿ ಇಂಥ ಭಯೋತ್ಪಾದನೆ ಸಂಘಟನೆಗಳು ಕರಾಚಿಯೊಂದಿಗೆ ನಿಕಟ ನಂಟು ಹೊಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪಾಕಿಸ್ತಾನದ ಅತ್ಯಂತ ಅಪಾಯಕಾರಿ ಸಂಘಟನೆಗಳು ತಮ್ಮ ಜಾಲ ಮತ್ತು ಸಂಪನ್ಮೂಲಗಳಿಗಾಗಿ ಕರಾಚಿ ನಗರದೊಂದಿಗೆ ಸಕ್ರಿಯ ಸಂಪರ್ಕ ಹೊಂದಿದೆ. ಪಾಕಿಸ್ತಾನದ ಕಾನೂನು ಇಲಾಖೆಯ ಕಡಿವಾಣ ಇಲ್ಲದೆ ಈ ಗುಂಪುಗಳು ಮತ್ತು ಕುಖ್ಯಾತ ಕ್ರಿಮಿನಲ್‍ಗಳು ಮದರಸಾ ಮತ್ತು ದತ್ತಿ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿ ಹೇಳಿದೆ.

ಪಾಕಿಸ್ತಾನ  ಸ್ಟೋಕಿಂಗ್ ದಿ ಫೈರ್ ಇನ್ ಕರಾಚಿ ಎಂಬ ಶೀರ್ಷಿಕೆ ಐಸಿಜಿ ವರದಿಯಲ್ಲಿ ಕೆಲವು ಆತಂಕಕಾರಿ ಸಂಗತಿಗಳನ್ನೂ ಸಹ ಬಹಿರಂಗಗೊಳಿಸಲಾಗಿದೆ. ಪಾಕಿಸ್ತಾನದ ಶ್ರೀಮಂತ ನಗರಿಯಾದ ಕರಾಚಿ ಜಿಹಾದಿಗಳು, ಕ್ರಿಮಿನಲ್‍ಗಳು ಮತ್ತು ಇವರಿಗೆ ಕುಮ್ಮಕ್ಕು ನೀಡುವ ರಾಜಕಾರಣಿಗಳಿಂದ ಪ್ರೆಷರ್ ಕುಕ್ಕರ್‍ನಂತಾಗಿದೆ. ಇಂಥ ಸಂಘಟನೆಗಳ ವಿರುದ್ಧ ಕ್ರಮ ಕೈಗೊಂಡಾಗ ಪಾಕಿಸ್ತಾನದ ಯೋಧರು ಭಯೋತ್ಪಾದಕರ ನೆಲೆಗಳ ಶೋಧ ನಡೆಸಿಲ್ಲ. ಈ ಮೂಲಕ ಉಗ್ರಗಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin