ಭಾರತದ ಆರ್ಥಿಕ ಶ್ರೇಣಿ ಏರಿಸಿದ ಮೂಡಿ, ಮೋದಿ ದಿಲ್ ಖುಷ್

ಈ ಸುದ್ದಿಯನ್ನು ಶೇರ್ ಮಾಡಿ

Modi--0002

ನವದೆಹಲಿ, ನ.17-ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಪದ್ದತಿ ಜಾರಿ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಕುಸಿದಿದೆ ಎಂಬ ಆರೋಪಗಳ ನಡುವೆಯೇ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದ ಆರ್ಥಿಕ ಶ್ರೇಣಿಯನ್ನು ಏರಿಸಿದೆ. ಅಮೆರಿಕ ಮೂಲದ ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆಯಾದ ಮೂಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದೇಶೀಯ ಮತ್ತು ವಿದೇಶಿ ಕರೆನ್ಸಿ ಸಾಲ ಶ್ರೇಣಿಯನ್ನು ಬಾ3 ನಿಂದ ಬಾ2ಗೆ (ದೀರ್ಘಾವಧಿ ಬಾಂಡ್‍ಗಳಿಗಾಗಿ ಮೂಡಿ ಸಂಸ್ಥೆ ಸಾಲ ಶ್ರೇಣಿಗಾಗಿ ಬಳಸುವ ಸಂಕೇತಾಕ್ಷರ) ಏರಿಸಿದೆ. ಇದು ಮೋದಿ ಸರ್ಕಾರಕ್ಕೆ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಜಿಎಸ್‍ಟಿಯನ್ನು ಶ್ಲಾಘಿಸಿರುವ ಮೂಡಿ, ಭಾರತದ ಸಾಂಸ್ಥಿಕ ಸುಧಾರಣೆಗಳ ಬೆಂಬಲದಿಂದಾಗಿ ಆರ್ಥಿಕತೆಯಲ್ಲಿ ಪ್ರಗತಿ ಕಾಣುತ್ತಿರುವ ಅಂಶಗಳನ್ನು ಪರಿಗಣಿಸಿ ಈ ಶ್ರೇಣಿ ನೀಡಿದೆ. ಈ ಸುಧಾರಣೆಗಳು ದೇಶದಲ್ಲಿ ವಾಣಿಜ್ಯ ವಾತಾವರಣವನ್ನು ಮತ್ತಷ್ಟು ಸುಧಾರಿಸಲಿದೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲಿದೆ ಎಂದು ಹೇಳಿದೆ. 2004ರಲ್ಲಿ ಮೂಡಿ ಸಂಸ್ಥೆಯು ಭಾರತದ ಆರ್ಥಿಕ ಶ್ರೇಣಿಯನ್ನು ಬಾ3ಗೆ ಏರಿಸಿತ್ತು. 13 ವರ್ಷಗಳ ಅಂತರದ ನಂತರ ಈಗ ಅದು ಶ್ರೇಣಿಯನ್ನು ಪರಿಷ್ಕರಿಸಿದ್ದು. ಬಾ2 ಹಂತ ತಲುಪಿದೆ.

ವ್ಯಾಪಕ ಸ್ವಾಗತ : ಮೂಡಿ ಶ್ರೇಣಿ ಮೇಲ್ದರ್ಜೆಯನ್ನು ಕೇಂದ್ರ ಸರ್ಕಾರ ಮತ್ತು ದೇಶದ ಪ್ರಮುಖ ವಾಣಿಜ್ಯ ಸಂಸ್ಥೆಗಳು ಸ್ವಾಗತಿಸಿವೆ.

Facebook Comments

Sri Raghav

Admin