ಭಾರತದ ಕೀರ್ತಿ ಪತಾಕೆ ಹಾರಿಸಿದ ವೀರ ನಾರಿಯರು

ಈ ಸುದ್ದಿಯನ್ನು ಶೇರ್ ಮಾಡಿ

Deeppa

ರಿಯೋ ಒಲಿಂಪಿಕ್ಸ್ಗೆ ಹೋಗಿರುವ ಕ್ರೀಡಾಪಟುಗಳು ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಹೋಗಿದ್ದಾರೆ ಹೊರತು ಪದಕ ಗೆಲ್ಲುವುದಕ್ಕೆ ಅಲ್ಲ ಎಂದು ಪತ್ರಕರ್ತೆ ಶೋಭಾಡೇ ಟೀಕೆ ಮಾಡಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದವರಂತೆ ಈ ಮೂವರು ಮಹಿಳೆಯರು ವಿಶ್ವದೆದುರು ಭಾರತದ ಕೀರ್ತಿ ಪತಾಕೆ ಹಾರಿಸಿ ಟೀಕೆಗೆ ತಕ್ಕ ಉತ್ತರ ನೀಡಿದ್ದಾರೆ.   ರಿಯೋಒಲಿಂಪಿಕ್ಸ್ನ ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಗೆದ್ದು, ಭಾರತೀಯ ಹೃದಯಗೆದ್ದ ಹೈದರಾಬಾದ್ಆಟಗಾರ್ತಿ ಪಿ.ವಿ.ಸಿಂಧು, ಕುಸ್ತಿ ವಿಭಾಗದಲ್ಲಿ ಕಂಚು ಗೆದ್ದು ಹೊಸ ಭಾಷ್ಯ ಬರೆದಿರುವ ಹರಿಯಾಣದ ಗಟ್ಟಿಗಿತ್ತಿ ಸಾಕ್ಷಿ ಮಲಿಕ್ ಹಾಗೂ ಮಹಿಳೆಯರ ಜಿಮ್ನಾಸ್ಟಿಕ್ ವಾಲ್ಟ್ ವಿಭಾಗದಲ್ಲಿ ದೀಪಾ ಕರ್ಮಾಕರ್ ಸಾಧನೆ ಮಾಡಿರುವ ಮೂವರು ಮಹಿಳಾ ಕ್ರೀಡಾಪಟುಗಳಿಗೆ ಕೋಟಿಕೋಟಿ ಅಭಿನಂದನೆಗಳು. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ ಆಗಿರುವ ಪಿ.ವಿ. ಸಿಂಧು ರಜತ ಪದಕ ಗೆದ್ದ ಭಾರತದ ಮೊಟ್ಟ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಎಂತಹಕಷ್ಟದಲ್ಲಿದ್ದರೂ ಧೃತಿಗೆಡದೆ ಕಠಿಣ ಪರಿಶ್ರಮದಿಂದ ಸಿಂಧು ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು. ರಿಯೋ ಒಲಿಂಪಿಕ್ಸ್ಗೆ ನೂರಕ್ಕಿಂತ ಹೆಚ್ಚು ಕ್ರೀಡಾಳುಗಳನ್ನು ಕಳುಹಿಸಿ ಭಾರತಕ್ಕೆ ಈ ಬಾರಿಅತಿ ಹೆಚ್ಚು ಪದಕ ಸಿಗಬಹುದು ಎಂಬ ಅಪಾರ ನಿರೀಕ್ಷೆಯಿತ್ತು. ಆದರೆ ಈ ಸ್ಟಾರ್ ಆಟಗಾರರರು ಉತ್ತಮ ಆಟವಾಡುವಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದ್ದರು. ಇವತ್ತು ಪದಕ ಬರುತ್ತೇ, ನಾಳೆ ಬರಬಹುದು ಅಥವಾ ನಾಡಿದ್ದು ಬರಬಹುದು ಎಂದು ನಾವೆಲ್ಲ ಲೆಕ್ಕ ಹಾಕುತ್ತಿದ್ದವು. ಭಾರತಕ್ಕೆ ಯಾವುದೇ ಒಂದು ಪದಕ ಸಿಗು ಇಲ್ಲವೋ ಅನ್ನೋ ಅನುಮಾನ ಕೂಡ ಮನೆ ಮಾಡಿತ್ತು. ಆದರೂ ಅ ಕನಸನ್ನು ನನಸು ಮಾಡಿದ ಸಾಕ್ಷಿ ಮಲಿಕ್ ಹಾಗೂ ಪಿವಿ ಸಿಂಧು ಅವರಿಗೆ ಇಡೀ ಭಾರತ ಋಣಿ.
ಬ್ಯಾಡ್ಮಿಂಟನ್ಕ್ರೀಡೆಯನ್ನುತನ್ನ ವೃತ್ತಿಯನ್ನಾಗಿಸಿಕೊಂಡಿದ್ದ ಸಿಂಧು ಚಿಕ್ಕ ವಯಸ್ಸಿನಲ್ಲಿ ಅಕಾಡೆಮಿಗೆ ಸೇರಿಕೊಂಡು ಅಭ್ಯಾಸ ನಡೆಸುತ್ತಿದ್ದರು. ತನ್ನ ಮಗಳನ್ನು ಹೆಸರಾಂತ ಆಟಗಾರ್ತಿಯನ್ನಾಗಿ ಮಾಡ ಬೇಕೆಂಬ ಹಂಬಲ ತಂದೆ-ತಾಯಿಯಲ್ಲಿತ್ತು.   ಹೀಗಾಗಿ ಯಾವುದೇ ತೊಂದರೆ ಬರದಂತೆ ನೋಡಿಕೊಂಡು ತರಬೇತಿಗೆ ಕಳುಹಿಸಿದ್ದರು. ಹಂತ ಹಂತವಾಗಿ ನಡೆದ ಚಾಂಪಿನ್ಶಿಪ್ನಲ್ಲಿ ಸಿಂಧು ಅಮೋಘ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಬಾಚಿಕೊಂಡರು. ಮಗಳ ಸಾಧನೆಗೆ ಪ್ರೋತ್ಸಾಹದ ಧಾರೆ ಎರೆದ ತಂದೆ-ತಾಯಿ ಸಂತೋಷಕ್ಕೆ ಪಾರವೇ ಇರಲಿಲ್ಲ.  ಕಳೆದ ಐದು ವರ್ಷಗಳಲ್ಲಿ ಹೈದರಾಬಾದ್ಆಟಗಾರ್ತಿ ವೃತ್ತಿ ಬದುಕಿನಲ್ಲಿ ಇತಿಹಾಸ ನಿರ್ಮಿಸಿದ್ದು, ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 2011ರಲ್ಲಿ ಕಾಮನ್ವೆಲ್ತ್ ಯೂತ್ಗೇಮ್ಸ್ನಲ್ಲಿ ಚಾಂಪಿಯನ್, 2012ರಲ್ಲಿ ಸ್ವಿಸ್ ಇಂಟರ್ ನ್ಯಾಷನಲ್ ಚಾಂಪಿಯನ್, 2012ರಲ್ಲಿ ಗಿಮ್ಚಿಯಾನ್ ಏಷ್ಯಾ ಜೂನಿಯರ್ ಚಾಂಪಿಯನ್ಶಿಪ್, 2013ರಲ್ಲಿ ಚೀನಾದಲ್ಲಿ ನಡೆದ ವಿಶ್ವಚಾಂಪಿಯನ್ ಟೂರ್ನಿಯಲ್ಲಿ ಕಂಚಿನ ಪದಕ, 2013ರಲ್ಲಿ ಕೌಲಾಂಲಂಪುರದಲ್ಲಿ ನಡೆದ ಮಲೇಷಿಯಾಗ್ರ್ಯಾನ್ ಫ್ರೀಚಾಂಪಿಯನ್, 2014ರಲ್ಲಿ ಡೆನ್ಮಾರ್ಕ್ನಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಕಂಚು ಹಾಗೂ ಗ್ಲಾಸ್ಗೋ ಗೇಮ್ಸ್ನಲ್ಲಿ ಕಂಚು, 2015ರಲ್ಲಿ ಮಲೇಷಿಯಾ ಮಾಸ್ಟರ್ಸ್ ಹಾಗೂ ಮಾಕೌಓಲ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಈಗ 2016ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕಗೆದ್ದು ನೂತನ ದಾಖಲೆ ಬರೆದಿದ್ದಾರೆ. ಈ ಸಾಧನೆ ಮಾಡಲು ಸಿಂಧು ಗಟ್ಟಿ ನಿರ್ಧಾರ ತೆಗೆದುಕೊಂಡು ವಿದೇಶಿ ಆಟಗಾರ್ತಿಯರ ಸವಾಲನ್ನು ಸಮರ್ಥವಾಗಿ ಎದುರಿಸಿ ಈ ಸಾಧನೆ ಮಾಡಿದ್ದಾರೆ. ಈ ಸಾಧನೆ ಹಿಂದೆ ಆಕೆಯ ಕೋಚ್ಗೋಪಿಚಂದ್ ಅವರ ಶ್ರಮವೂ ಇದೆ.   ಒಲಿಂಪಿಕ್ಸ್ನ ಮಹಿಳೆಯರ 58 ಕೆಜಿ ಫ್ರೀಸ್ಟೈಲ್ ವಿಭಾಗದ ಕುಸ್ತಿಯಲ್ಲಿ ಪದಕ ಗೆದ್ದ ಸಾಕ್ಷಿ ಮಲಿಕ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಹರಿಯಾಣ ಆಟಗಾರ್ತಿ ಮೈನವಿರೇಳಿಸುವ ಪ್ರದರ್ಶನ ನೀಡಿ ಪದಕ ಗೆದ್ದರು.  ತ್ರಿಪುರ ಹುಡುಗಿ ದೀಪಾ ಕರ್ಮಾಕರ್ಅವರ ಸಾಧನೆಯನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ. ಒಲಿಂಪಿಕ್ಸ್ಗೆ ಹೋಗುವ ಮುನ್ನ ಈ ಹುಡುಗಿಯ ಹೆಸರು ಬಹುಶಃ ಯಾರಿಗೂ ಗೊತ್ತಿರಲಿಲ್ಲ. ಜಿಮ್ನಾಸ್ಟಿಕ್ನಲ್ಲಿ ಪದಕ ಗೆಲ್ಲಲೇಬೇಕು ಅನ್ನೋ ಛಲದಿಂದ ಗುರಿ ಇಟ್ಟುಕೊಂಡಿದ್ದ ಈಕೆ 23 ವರ್ಷದ ದೀಪಾ ಕರ್ಮಾಕರ್ ವಾಲ್ಟ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿ ಸ್ಪಲ್ಪದರಲ್ಲೇ ಪದಕದಿಂದ ವಂಚಿತರಾಗಿದ್ದರು.

ಆದರೆ ಅವರು ನೀಡಿದ ಅಮೋಘ ಪ್ರದರ್ಶನಕ್ಕೆ ಇಡೀ ವಿಶ್ವವೇ ಆಕೆ ಕಡೆ ನೋಡುವಂತೆ ಮಾಡಿದ್ದಳು. 52 ವರ್ಷದ ನಂತರ ಜಿಮ್ನಾಸ್ಟಿಕ್ ವಿಭಾಗದಲ್ಲಿ ಪ್ರತಿನಿಸುತ್ತಿರುವ ಭಾರತದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ದೀಪಾ 2014ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿಕ ಪದಕ, 2015ರಲ್ಲಿ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಮೂವರು ಮಹಿಳಾ ಆಟಗಾರ್ತಿ ಯರು ವಿವಿಧ ವಿಭಾಗಗಳಲ್ಲಿ ಅಮೋಘ ಸಾಧನೆ ಮಾಡುವ ಮೂಲಕ ರಾಷ್ಟ್ರಕ್ಕೆ ಹೆಮ್ಮೆತಂದಿದ್ದಾರೆ. ಕ್ರಿಕೆಟನ್ನು ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳಿರುವ ನಮ್ಮ ದೇಶದಲ್ಲಿ ಬಾಕ್ಸಿಂಗ್, ಜಿಮ್ನಾಸ್ಟಿಕ್ ಹಾಗೂ ಬ್ಯಾಡ್ಮಿಂಟನ್ ಆಟವನ್ನು ಮೂಲೆ ಗುಂಪು ಮಾಡಲಾಗಿತ್ತು.

ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿಯೊಬ್ಬ ಕ್ರೀಡಾಪಟುವಿಗೆ ಪ್ರೋತ್ಸಾಹ, ತರಬೇತಿ ಮತ್ತು ಹಣ ಸಹಾಯ ಮಾಡಬೇಕು. ಸಾಕಷ್ಟು ಪ್ರತಿಭೆಗಳಿದ್ದರೂ ಸೂಕ್ತ ಪ್ರೋತ್ಸಾಹ ದೊರಕುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರವು ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಸೌಲಭ್ಯ ನೀಡಬೇಕು. ಕಳೆದ ಒಲಿಂಪಿಕ್ಸ್ನಲ್ಲಿ ಶೂಟಿಂಗ್ ಹಾಗೂ ಬಾಕ್ಸಿಂಗ್ನಲ್ಲಿ ಭಾರತ ಅದ್ಭುತ ಪ್ರದರ್ಶನ ವನ್ನು ನೀಡಿತ್ತು. ಆದರೆ ಈ ಬಾರಿ ಒಲಿಂಪಿಕ್ಸ್ ನಲ್ಲಿ ಅಂತಹುದೇ ಪ್ರದರ್ಶನ ನೀಡುವಲ್ಲಿ ಕ್ರೀಡಾಪಟುಗಳು ವಿಫಲರಾಗಿದ್ದಾರೆ.
– ಹರೀಶ್ ಹಾಸನ್

Facebook Comments

Sri Raghav

Admin