ಭಾರತದ ಕ್ರಿಕೆಟಿಗರಿಗೆ ಹೊಡೀತು ಜಾಕ್‍ಪಾಟ್…!

ಈ ಸುದ್ದಿಯನ್ನು ಶೇರ್ ಮಾಡಿ

Team--01

ನವದೆಹಲಿ, ಡಿ.15- ಹೊಸ ವರ್ಷ ಆರಂಭಕ್ಕೂ ಮುನ್ನವೇ ಭಾರತೀಯ ಕ್ರಿಕೆಟಿಗರಿಗೆ ಜಾಕ್‍ಪಾಟ್ ಹೊಡೆದಿದೆ. ಈಗಾಗಲೇ ಮದುವೆಯ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ , ತಂಡದ ತರಬೇತುದಾರ ರವಿಶಾಸ್ತ್ರಿಗೂ ಲಕ್ ಕುದುರಿದೆ. ಸತತ ಸರಣಿಗಳನ್ನು ಆಡಿ ಬಳಲಿದ್ದ ಬೆನ್ನಲ್ಲೇ ವೇತನವನ್ನು ಹೆಚ್ಚಿಸಬೇಕೆಂಬ ಪ್ರಸ್ತಾಪ ಪದೇ ಪದೇ ತಂಡದ ನಾಯಕ ವಿರಾಟ್ ಕೊಹ್ಲಿ , ತರಬೇತುದಾರ ರವಿಶಾಸ್ತ್ರಿ ಹಾಗೂ ಮಾಜಿ ಕ್ರಿಕೆಟಿಗ ಸೌರವ್‍ಗಂಗೂಲಿ ಬಿಸಿಸಿಐ ಗಮನ ಸೆಳೆದಿದ್ದು ಈಗ ತಂಡದ ಆಟಗಾರರ ವೇತನ ದುಪ್ಪಟ್ಟು ಏರಿಕೆಯಾಗುವ ಲಕ್ಷಣಗಳಿವೆ.

ಐಸಿಸಿ ಕಮಿಟಿಯಲ್ಲೇ ಅತ್ಯಂತ ಶ್ರೀಮಂತ ಸಂಸ್ಥೆಯೆಂದೇ ಬಿಂಬಿಸಿಕೊಂಡಿರುವ ಬಿಸಿಸಿಐಗೆ ಸತತ ಸರಣಿಗಳಿಂದ ಅಲ್ಲದೆ ಕ್ರಿಕೆಟ್ ಹಬ್ಬವಾಗಿರುವ ಐಪಿಎಲ್ ಹಾಗೂ ಸ್ವದೇಶಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಯೋಜಿಸಿರುವುದರಿಂದ ಭಾರೀ ವರಮಾನವೇ ಹರಿದು ಬರಲಿದೆ. ಈ ನಡುವೆ ಸುಪ್ರೀಂಕೋರ್ಟ್ ಕೂಡ ಸಮಿತಿಯೊಂದನ್ನು ರಚಿಸಿದ್ದು ಅದರ ಪ್ರಕಾರ ಬಿಸಿಸಿಐ ಕಳೆದ ವರ್ಷಕ್ಕಿಂತ ಈ ಬಾರಿ 20 ಕೋಟಿ ಹೆಚ್ಚು ವರಮಾನವನ್ನು ಆಟಗಾರರಿಗೆ ವರಮಾನದ ರೂಪದಲ್ಲಿ ನೀಡಿದೆ. 2016ರಲ್ಲಿ ಬಿಸಿಸಿಐ ಎಲ್ಲಾ ಮೂಲಗಳಿಂದ 180 ಕೋಟಿ ರೂ.ಗಳನ್ನು ಗಳಿಸಿದ್ದರೆ, ಈ ಬಾರಿ 200 ಕೋಟಿಗೆ ಏರಿದೆ. ಇನ್ನು ಮುಂದೆ ಆಟಗಾರರ ವರಮಾನವು 380 ಕೋಟಿ ರೂ.ವರೆಗೂ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.

ಬಿಸಿಸಿಐ ಖರ್ಚು ವೆಚ್ಚ:
ಇತ್ತೀಚೆಗೆ ನಡೆದ ಐಸಿಸಿ ಸಮಿತಿಯಲ್ಲಿ ಮುಂದಿನ 8 ವರ್ಷಗಳ ಒಡಬಂಡಿಕೆಯಿಂದ ಬಿಸಿಸಿಐ 293 ಮಿಲಿಯನ್ ಡಾಲರ್‍ನಷ್ಟು ವರಮಾನ ಪಡೆದಿದೆ. ಬಿಸಿಸಿಐ ಒಂದು ವರ್ಷಕ್ಕೆ ಶೇ.26 ವೆಚ್ಚವನ್ನು ಮೂರು ವಿಭಾಗಗಳಲ್ಲಿ ಖರ್ಚು ಮಾಡುತ್ತಿದ್ದು ಇದರ ಅನ್ವಯ ಅಂತರಾಷ್ಟ್ರೀಯ ಆಟಗಾರಿಗೆ ಶೇ. 13ರಷ್ಟು ವರಮಾನ ಮೀಸಲಿಟ್ಟರೆ, ರಣಜಿ ಆಟಗಾರಿಗೆ ಶೇ.10.6 ಇನ್ನುಳಿದ ಹಣವನ್ನು ಮಹಿಳಾ ಹಾಗೂ ಕಿರಿಯ ಆಟಗಾರರ ಅಭಿವೃದ್ಧಿಗಾಗಿ ಮೀಸಲಿಟ್ಟಿದೆ.

ಕೊಹ್ಲಿಗೆ ಜಾಕ್‍ಪಾಟ್:
ಈಗ ತಾನೇ ಹೊಸಬಾಳಿನ ಹೊಸ್ತಿಲಲ್ಲಿರುವ ಭಾರತ ತಂಡದ ವಿರಾಟ್ ಕೊಹ್ಲಿಗೆ ಈ ಬಾರಿ ಜಾಕ್‍ಪಾಟ್ ಹೊಡೆದಿದೆ. ಒಂದೆಡೆ ಜಾಹೀರಾತು ವಿಭಾಗದಲ್ಲಿ ತನ್ನ ಬೇಡಿಕೆಯನ್ನು ಮತ್ತಷ್ಟು ಏರಿಸಿಕೊಂಡಿದ್ದರೆ, ಇತ್ತ ಕ್ರಿಕೆಟ್ ಅಂಗಳದಲ್ಲೂ ಸಾಕಷ್ಟು ದಾಖಲೆಯನ್ನು ನಿರ್ಮಿಸುವುದರ ಜೊತೆಗೆ 2017ರಲ್ಲಿ ಆಡಿದ 47 ಪಂದ್ಯಗಳಿಂದ 5.51 ಕೋಟಿ ವರಮಾನವನ್ನು ಗಳಿಸಿದ್ದಾರೆ. ನೂತನ ಅಧಿನಿಯಮದ ಪ್ರಕಾರ ವಿರಾಟ್ ಇನ್ನೂ ಮುಂದೆ ವರ್ಷಕ್ಕೆ 10 ಕೋಟಿ ವರಮಾನ ಗಳಿಸಿಕೊಳ್ಳಲಿದ್ದಾರೆ.

ರಣಜಿ ಆಟಗಾರರಿಗೂ ಅದೃಷ್ಟ:
ಭಾರತದ ತಂಡದ ಕ್ರಿಕೆಟ್ ಆಟಗಾರರ ವರಮಾನ ಹೆಚ್ಚಾಗುತ್ತಿದ್ದಂತೆ ದೇಶಿ ಕ್ರಿಕೆಟ್ ಆದ ರಣಜಿ, ದುಲೀಪ್, ಇರಾನಿ ಮುಂತಾದ ಟೂರ್ನಿಗಳಲ್ಲಿ ಪಾಲ್ಗೊಳ್ಳುವ ಆಟಗಾರರ ವರಮಾನವು ದುಪ್ಪಟ್ಟಾಗಲಿದೆ. ಇದುವರೆಗೂ ರಣಜಿ ಆಟಗಾರರು ಒಂದು ಋತುವಿಗೆ 12 ರಿಂದ 15 ಲಕ್ಷ ಸಂಭಾವನೆ ಪಡೆಯುತ್ತಿದ್ದು ಇನ್ನು ಮುಂದೆ 30 ಲಕ್ಷ ವರಮಾನ ಗಳಿಸಲಿದ್ದಾರೆ.

Facebook Comments

Sri Raghav

Admin