ಭಾರತದ ನಂ.1 ಸ್ಥಾನಕ್ಕೆ ವರುಣನ ಅವಕೃಪೆ

ಈ ಸುದ್ದಿಯನ್ನು ಶೇರ್ ಮಾಡಿ

Kohli

ಗ್ರೋಸ್‍ಐಸ್‍ಲೆಟ್, ಆ.12-  ವೆಸ್ಟ್ ಇಂಡೀಸ್  ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಗೆಲ್ಲುವ ಮೂಲಕ  ಐಸಿಸಿ ರ್ಯಾಂಕಿಂಗ್‍ನಲ್ಲಿ ಟಾಪ್ 1  ಸ್ಥಾನಕ್ಕೆ ಏರಬೇಕೆಂಬ ಭಾರತದ ಆಸೆಗೆ ವರುಣ ತಣ್ಣೀರೆರಚಿದೆ.   ಸರಣಿಯ 2ನೆ ಪಂದ್ಯದ  3 ಹಾಗೂ 4 ದಿನ ಆಟವನ್ನು ಸಂಪೂರ್ಣವಾಗಿ ಆಹುತಿ  ಪಡೆದಿದ್ದ ವರುಣನ ಕೃಪೆಯಿಂದ ವೆಸ್ಟ್‍ಇಂಡೀಸ್ ತಂಡವು ಸೋಲಿನಿಂದ   ಪಾರಾಗಿತ್ತು.  ಈಗ ಇಲ್ಲಿ ನಡೆಯುತ್ತಿರುವ ಡೆರೇನ್ ಸ್ಯಾಮಿ  ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 3  ಪಂದ್ಯಕ್ಕೂ ವರುಣನ ಕಾಟ ಆರಂಭಗೊಂಡಿದೆ.  ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 353 ರನ್‍ಗಳನ್ನು  ಗಳಿಸಿತು. ನಂತರ ವೆಸ್ಟ್‍ಇಂಡೀಸ್‍ನ ಆಟಗಾರರು 2ನೆ ದಿನದಾಟಕ್ಕೆ 1 ವಿಕೆಟ್ ಕಳೆದುಕೊಂಡು 107 ರನ್‍ಗಳನ್ನು ಗಳಿಸಿದರು.  ಆದರೆ ಪಂದ್ಯದ ಮೂರನೆ ದಿನದಾಟ ಪೂರ್ತಿ  ವರುಣ ತನ್ನ ಆಟವನ್ನು  ತೋರಿಸಿದ್ದು ಈಗ  ಟೆಸ್ಟ್ ಪಂದ್ಯವು ಡ್ರಾನತ್ತ ಸಾಗುವುದು ಬಹುತೇಕ ಖಚಿತವಾಗಿದೆ. ಕೆರಿಬಿಯನ್ ನೆಲದಲ್ಲಿ ಹೆಚ್ಚು ಪಂದ್ಯ ಗೆದ್ದ ನಾಯಕನಾಗುವ ದಾಖಲೆ ನಿರ್ಮಿಸಲು ಕೊಹ್ಲಿ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಕಾಯುವಂತಾಗಿದೆ.

Facebook Comments

Sri Raghav

Admin