ಭಾರತದ ಪತ್ರಕರ್ತರ ಮೇಲೆ ಪಾಕ್ ಅಧಿಕಾರಿಗಳ ದೌರ್ಜನ್ಯ

ಈ ಸುದ್ದಿಯನ್ನು ಶೇರ್ ಮಾಡಿ

ASfaSDGg

ನವದೆಹಲಿ, ಆ.7- ಇಸ್ಲಮಾಬಾದ್‍ನಲ್ಲಿ ಸಾರ್ಕ್ ಗೃಹ ಸಚಿವರ ಸಮ್ಮೇಳನ ವರದಿಗೆ ತೆರಳಿದ್ದ ಭಾರತೀಯ ಪತ್ರಕರ್ತರ ಮೇಲೆ ಪಾಕಿಸ್ತಾನದ ಅಧಿಕಾರಿಗಳು ದೌರ್ಜನ್ಯ ಎಸಗಿರುವ ಇನ್ನೊಂದು ಪ್ರಕರಣ ವರದಿಯಾಗಿದೆ.  ಉದ್ಘಾಟನಾ ಸಮಾರಂಭ ಪ್ರವೇಶಿಸಲು ಅನುಮತಿ ನಿರಾಕರಿಸಿದ ಪಾಕ್ ಅಧಿಕಾರಿಗಳು ಸಾರ್ಕ್ ಸಮಾವೇಶದ ಸ್ಥಳ ಪ್ರವೇಶದ್ವಾರದ ಬಳಿ ನಿಲ್ಲಲೂ ಭಾರತೀಯ ಪತ್ರಕರ್ತರಿಗೆ ಅವಕಾಶ ನೀಡದ ಉದ್ಧಟತನ ಪ್ರದರ್ಶಿಸಿದ್ದಾರೆ.  ಇಸ್ಲಮಾಬಾದ್‍ನಲ್ಲಿ ನಡೆದ ಸಾರ್ಕ್ ಗೃಹ ಸಚಿವರ ಸಮ್ಮೇಳನದ ವರದಿ ಮಾಡಲು ಭಾರತದ ಆರು ಪತ್ರಕರ್ತರಿಗೆ ವೀಸಾ ನೀಡಲಾಗಿತ್ತು. ಆದರೆ, ಪ್ರಧಾನಮಂತ್ರಿ, ನವಾಜ್ ಷರೀಫ್ ಭಾಗವಹಿಸಿದ್ದ ಉದ್ಘಾಟನಾ ಸಮಾರಂಭವನ್ನು ಪ್ರವೇಶಿಸಲು ಇವರಿಗೆ ಅವಕಾಶ ನಿರಾಕರಿಸಲಾಗಿತ್ತು.

ಬೇರೆ ದಾರಿಯಿಲ್ಲದೆ ಸಾರ್ಕ್ ಸಮಾವೇಶ ಸ್ಥಳದ ಗೇಟ್ ಬಳಿ ಭಾರತೀಯ ಪತ್ರಕರ್ತರು ನಿಂತಿದ್ದರು. ಸಾರ್ಕ್ ಗಣ್ಯರನ್ನು ಸ್ವೀಕರಿಸಲು ಪಾಕಿಸ್ತಾನ ಒಳಾಡಳಿತ ಸಚಿವ ಚೌಧರಿ ನಿಸಾರ್ ಅಲಿಖಾನ್ ಅಲ್ಲಿದ್ದರು. ಗೃಹ ಸಚಿವ ರಾಜನಾಥ್‍ಸಿಂಗ್ ಅಲ್ಲಿಗೆ ಬರುತ್ತಿದ್ದಂತೆ ಪಾಕ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾರತದ ಪತ್ರಕರ್ತರೂಹತ್ತಿರಕ್ಕೆ ತೆರಳಿದಾಗ ಪಾಕ್ ಅಧಿಕಾರಿಗಳು ದುರುಳುತನ ತೋರಿದರು. ಮೊದಲು ಇಲ್ಲಿಂದ ಹೊರಗೆ ನಡೆಯಿರಿ, ಗೇಟ್ ಹೊರಗೆ ನಿಲ್ಲಲೂ  ಕೂಡ ನಿಮಗೆ ಅನುಮತಿ ಇಲ್ಲ ಎಂದು ದುರ್ವರ್ತನೆ ಪ್ರದರ್ಶಿಸಿದರು.

ದೂರದರ್ಶನ ಕ್ಯಾಮೆರಾಮನ್ ಮತ್ತು ಎಎನ್‍ಐ ಪ್ರತಿನಿಧಿಗೆ ತಮ್ಮ ಕ್ಯಾಮೆರಾಗಳನ್ನು ಬಂದ್ ಮಾಡುವಂತೆ ಪಾಕ್ ಅಧಿಕಾರಿಗಳು ತಾಕೀತು ಮಾಡಿ ಈ ಸಂದರ್ಭದಲ್ಲಿ ಭಾರತೀಯ ಹಿರಿಯ ರಾಜತಾಂತ್ರಿಕರೊಬ್ಬರು ಮಧ್ಯ ಪ್ರವೇಶಿಸಿ ಪಾಕ್ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಿದಾಗ ಮಾತಿನ ಚಕಮಕಿ ನಡೆಯಿತು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin