ಭಾರತದ ಪ್ರಪ್ರಥಮ ಪರಿಸರ ಸ್ನೇಹಿ ಜಲಜನಕ ಚಾಲಿತ ಬಸ್ ಅಭಿವೃದ್ದಿ

ಈ ಸುದ್ದಿಯನ್ನು ಶೇರ್ ಮಾಡಿ

Bus--001

ಚೆನ್ನೈ, ಜೂ.15-ಭಾರತದ ಪ್ರಥಮ ಜಲಜನಕ (ಹೈಡ್ರೋಜೆನ್) ಚಾಲಿತ ಬಸ್ಸೊಂದನ್ನು ಟಾಟಾ ಮೋಟಾರ್ಸ್ ಸಂಸ್ಥೆ (ಟಿಎಂಎಲ್) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಭಿವೃದ್ದಿಗೊಳಿಸಿದೆ. ಹಲವಾರು ವರ್ಷಗಳ ಸಂಶೋಧನೆಯ ಫಲಶೃತಿಯಾಗಿ ನಿರ್ಮಾಣಗೊಂಡಿರುವ ಈ ವಾಹನವು ಸಂಪೂರ್ಣ ಮಾಲಿನ್ಯ ಮುಕ್ತವಾಗಿದ್ದು ಪರಿಸರ ಸ್ನೇಹಿಯಾಗಿದೆ.  ತಮಿಳುನಾಡಿನ ಮಹೇಂದ್ರಗಿರಿಯಲ್ಲಿನ ಇಸ್ರೋದ ಎಲ್‍ಪಿಎಸ್‍ಸಿ (ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್) ಕೇಂದ್ರದಲ್ಲಿ ಜಲಜನಕ ಇಂಧನ-ಅಳವಡಿಕೆಯ ಬಸ್ ಪ್ರಾತ್ಯಕ್ಷಿಕೆ ಗಮನಸೆಳೆಯಿತು.

ಇದೊಂದು ಸಿಎನ್‍ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಅಥವಾ ಸಂಕುಚಿತ ಸ್ವಾಭಾವಿಕ ಅನಿಲ) ರೀತಿಯ ವಾಹನವಾಗಿದ್ದು, ಅದೇ ತಂತ್ರಜ್ಞಾನವನ್ನು ಅತ್ಯಾಧುನಿಕ ರೀತಿಯಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಸಂಪೂರ್ಣ ಜಲಜನಕ ಇಂಧನದಲ್ಲಿ ಈ ಬಸ್ ಸಂಚರಿಸಲಿದ್ದು, ಮಾಲಿನ್ಯ ಮುಕ್ತವಾಗಿರುತ್ತದೆ. ವಾಹನದ ಮೇಲ್ಘಾಗದಲ್ಲಿ ಶೀಷೆಗಳಲ್ಲಿ ಅಧಿಕ ಒತ್ತಡದ ಜಲಜನಕವನ್ನು ಸಂಕುಚಿತಗೊಳಿಸಿ ಸಂಗ್ರಹಿಸಿ ಇಡಲಾಗುತ್ತಿದೆ. ಇದು ಪ್ಯೂಯಲ್ ಸೆಲ್‍ಗಳ (ಇಂಧನ ಕೋಶಗಳು) ರೀತಿ ಕಾರ್ಯನಿರ್ವಹಿಸುತ್ತದೆ. ಹೊಗೆ ಅಥವಾ ಶಬ್ಧ ಇರುವುದಿಲ್ಲ. ಇದೊಂದು ಶೂನ್ಯ ಮಾಲಿನ್ಯ ತಂತ್ರಜ್ಞಾನ ಎಂದು ಇಸ್ರೋ ಮತ್ತು ಟಾಟಾ ಸಂಸ್ಥೆಯ ಅಧಿಕಾರಿಗಳು ವಿವರಿಸಿದ್ದಾರೆ.

ಇಸ್ರೋ ಕಳೆದ ಕೆಲವು ವರ್ಷಗಳಿಂದ ಅಭಿವೃದ್ದಿಗೊಳಿಸಿರುವ ಕ್ರಯೋಜೆನಿಕ್ ತಂತ್ರಜ್ಞಾನದ ಮಾದರಿಯಲ್ಲೇ ಹೈಡ್ರೋಜೆನ್ ಕೋಶಗಳನ್ನು ಈ ಬಸ್‍ಗೆ ಬಳಸಲಾಗಿದೆ ಎಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.   ಇದು ಪರಿಸರ ಸ್ನೇಹಿ ತಂತ್ರಜ್ಞಾನಗಳಲ್ಲೊಂದು ಮೈಲಿಗಲ್ಲು ಎಂದು ಟಾಟಾ ಮೋಟಾರ್ಸ್ ಸಂಸ್ಥೆ ತಿಳಿಸಿದೆ. ಇಂಧನವಾಗಿ ಹೈಡೋಜೆನ್ ಬಳಸಿಕೊಂಡು ವಿದ್ಯುತ್ ಉತ್ಪಾದಿಸಿ ಆ ಮೂಲಕ ಬಸ್ ಚಲಿಸುವಂತೆ ಮಾಡುವ ತಂತ್ರಜ್ಞಾನ ಇದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin