ಭಾರತದ ಪ್ರಮುಖ ನಗರಗಳ ಮೇಲೆ ಕಂಪ್ಯೂಟರ್ ವೈರಸ್ ದಾಳಿ, ಮುಂಬೈ ಬಂದರು ಸ್ತಬ್ಧ

ಈ ಸುದ್ದಿಯನ್ನು ಶೇರ್ ಮಾಡಿ

MUmab-i--01

ಮುಂಬೈ/ನವದೆಹಲಿ, ಜೂ.28-ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಗ್ಲೋಬಲ್ ರಾನ್‍ಸಮ್ (ಜಾಗತಿಕ ಸುಲಿಗೆ) ವೈರಸ್ ದಾಳಿ ಭಾರತದ ಪ್ರಮುಖ ನಗರಗಳ ಮೇಲೂ ಆಕ್ರಮಣ ಆರಂಭಿಸಿದ್ದು, ಹೊಸ ಆತಂಕ ಎದುರಾಗಿದೆ. ದೇಶದ ಬೃಹತ್ ಸರಕು ಸಾಗಣೆ ಬಂದರು ಎನಿಸಿರುವ ಮುಂಬೈನ ಜವಹರ್‍ಲಾಲ್ ನೆಹರು ಪೋರ್ಟ್ ಟ್ರಸ್ಟ್ (ಜೆಎನ್‍ಪಿಟಿ) ಕಾರ್ಯನಿರ್ವಹಣೆ ಸ್ಥಗಿತಕ್ಕೂ ಇದು ಕಾರಣವಾಗಿದ್ದು, ಆರ್ಥಿಕ ವಹಿವಾಟಿಗೆ ದೊಡ್ಡ ಹೊಡೆತ ನೀಡಿದೆ.

ಐರೋಪ್ಯ ದೇಶಗಳೂ ಸೇರಿದಂತೆ ಹಲವೆಡೆ ಸೆಂಟ್ರಲ್ ಬ್ಯಾಂಕುಗಳು ಮತ್ತು ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳ ಕಾರ್ಯ ಚಟುವಟಿಕೆಗಳಿಗೂ ಅಡ್ಡಿ ಉಂಟು ಮಾಡಿರುವ ಈ ವೈರಸ್ ದಾಳಿ ಭಾರತದ ಮೇಲೂ ದುಷ್ಪರಿಣಾಮ ಬೀರಿದೆ. ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳು ರಾನ್‍ಸಮ್ ವೈರಸ್‍ನಿಂದ ತೀವ್ರ ಆತಂಕಕ್ಕೆ ಒಳಗಾಗಿವೆ.   ಸುಮಾರು 18 ಲಕ್ಷ ಕಂಟೈನರ್ ಘಟಕಗಳ ಸಾಮಥ್ರ್ಯದ ಜೆಎನ್‍ಪಿಟಿಯ ಕೆಲವು ಟರ್ಮಿನಲ್‍ಗಳಲ್ಲಿ ಈಗಾಗಲೇ ಕಾರ್ಯಚರಣೆ ಸ್ಥಗಿತಗೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಎಪಿ ಮೊಲ್ಲೆರ್ ಮೈರಸ್ಕ್ ಸಂಸ್ಥೆ, ಜೆಎನ್‍ಪಿಟಿಯ ಗೇಟ್‍ವೇ ಟರ್ಮಿನಲ್ಸ್ ಇಂಡಿಯಾವನ್ನು(ಜಿಟಿಐ) ನಿರ್ವಹಿಸುತ್ತಿದ್ದು, ಸುಲಿಗೆ ವೈರಾಣು ಆಕ್ರಮಣದಿಂದ ಕಾರ್ಯಚಟುವಟಿಕೆ ಸ್ತಬ್ಧಗೊಂಡಿದೆ.

ಜಿಟಿಐನಲ್ಲಿ ಕಂಪ್ಯೂಟರ್ ವ್ಯವಸ್ಥೆ ದಾಳಿಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಕಂಪ್ಯೂಟರ್ ನೆರವು ಇಲ್ಲದೇ ಹಸ್ತಚಾಲಿತವಾಗಿ ಕಾರ್ಯನಿರ್ವಹಿಸುವುದು ಕಷ್ಟವಾಗಿರುವುದರಿಂದ ಈ ಘಟಕದಲ್ಲಿ ಭಾರಿ ಸಮಸ್ಯೆ ಎದುರಾಗಿದ್ದು, ಗೊಂದಲಗಳು ತಲೆದೋರಿವೆ ಎಂದು ಜೆಎನ್‍ಪಿಟಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಡೀ ವ್ಯವಸ್ಥೆ ಏರುಪೇರಾಗಿರುವುದರಿಂದ ಸಮರ್ಪಕ ಕಾರ್ಯನಿರ್ವಹಣೆಗೆ ತೊಡಕಾಗಿದೆ ಎಂಬುದನ್ನು ಮೂಲಗಳು ದೃಢಪಡಿಸಿವೆ.

ನೆದರ್‍ಲೆಂಡ್ಸ್‍ನ ಹೇಗ್ ಮೂಲದ ಎಪಿಎಂ ಟರ್ಮಿನಲ್ಸ್ ಗುಜರಾತ್‍ನ ಪಿಪಲೋವ್ ಟರ್ಮಿನಲ್‍ನನ್ನು ಸಹ ನಿರ್ವಹಣೆ ಮಾಡುತ್ತಿದೆ. ಹೊಸ ಮತ್ತು ಮಾರಕ ವೈರಸ್ ಪೆಟ್ಯಾ 17 ಎಪಿಎಂ ಟರ್ಮಿನಲ್‍ಗಳ ಮೇಲೂ ದಾಳಿ ನಡೆಸಿವೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ವೈರಸ್ ದಾಳಿಗೆ ಯುರೋಪ್ ತತ್ತರ :

ಕಂಪ್ಯೂಟರ್ ಸರ್ವರ್‍ಗಳ ಮೇಲೆ ಇಂದು ದೊಡ್ಡ ಮಟ್ಟದ ದಾಳಿ ನಡೆಯಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಯುರೋಪ ಖಂಡದಾದ್ಯಂತ ತೀವ್ರ ಆತಂಕ ಎದುರಾಗಿದೆ. ಉಕ್ರೈನ್‍ನನ್ನು ಮುಖ್ಯವಾಗಿ ಗುರಿಯಾಗಿಟ್ಟುಕೊಂಡು ಹ್ಯಾಕರ್‍ಗಳ ತೀವ್ರ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.  ಉಕ್ರೈನ್‍ನ ಪ್ರಮುಖ ವಿಮಾನನಿಲ್ದಾಣಗಳು, ವಿದ್ಯುತ್ ಸ್ಥಾವರ, ಸರ್ಕಾರಿ ಕಚೇರಿಗಳು ಹಾಗೂ ಕೆಲವು ಬ್ಯಾಂಕುಗಳ ಸರ್ವರ್ ವ್ಯವಸ್ಥೆಗೆ ಹಾನಿಯಾಗಲಿದೆ ಎಂಬ ಆತಂಕವಿದ್ದು, ವೈರಸ್ ಪ್ರತಿರೋಧಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin