ಭಾರತದ ಮೇಲೆ ಐಎಸ್ ಉಗ್ರರ ದಾಳಿ ಸಾಧ್ಯತೆ : ವಾರ್ನ್ ಮಾಡಿದ ಅಮೇರಿಕ

ಈ ಸುದ್ದಿಯನ್ನು ಶೇರ್ ಮಾಡಿ

ISIS-Attack

ನವದೆಹಲಿ, ನ.1-ಪಾಕಿಸ್ತಾನ ಪ್ರೇರಿತ ಭಯೋತ್ಪಾದರ ದಾಳಿ ಆತಂಕ ಇರುವಾಗಲೇ, ಭಾರತದ ಪ್ರಮುಖ ಸ್ಥಳಗಳ ಮೇಲೆ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಆಕ್ರಮಣ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಇದೇ ವೇಳೆ ಭಾರತದಲ್ಲಿರುವ ಅಮೆರಿಕನ್ನರು ಜಾಗೃತರಾಗಿರುವಂತೆ ಸೂಚನೆ ನೀಡಿದೆ. ಭಾರತದ ಪ್ರಮುಖ ಪ್ರವಾಸಿ ತಾಣಗಳು ಮತ್ತು ವಿದೇಶಿಯರು ಹೆಚ್ಚು ಭೇಟಿ ನೀಡುವ ಸ್ಥಳಗಳ ಮೇಲೆ ಭಯಾನಕ ದಾಳಿಗಳನ್ನು ನಡೆಸಲು ಐಎಸ್ ಉಗ್ರರು ಸಂಚು ರೂಪಿಸಿದ್ದಾರೆ ಎಂದು ದೆಹಲಿಯಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ತಿಳಿಸಿದೆ.

ಧಾರ್ಮಿಕ ಸ್ಥಳಗಳು, ಪ್ರಸಿದ್ಧ ದೇವಾಲಯಗಳು, ಮಾರುಕಟ್ಟೆಗಳು ಹಾಗೂ ಉತ್ಸವಗಳು ನಡೆಯುವ ಪ್ರದೇಶಗಳು ಉಗ್ರರ ಗುರಿಯಾಗಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಅಮೆರಿಕನ್ನರು ಎಚ್ಚರದಿಂದ ಇರುವಂತೆ ರಾಯಭಾರಿ ಕಚೇರಿ ಸೂಚನೆ ನೀಡಿದೆ.  ಭಾರತದಲ್ಲಿರುವ ಅಮೆರಿಕನ್ನರು ತಮ್ಮ ಭದ್ರತೆ ಮತ್ತು ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin