ಭಾರತದ ಮೇಲೆ ದಾಳಿಗೆ ಅಘ್ಪನ್ ಉಗ್ರರ ನೆರವು : ‘ಪಾಪಿ’ಸ್ಥಾನದ ಕುತಂತ್ರ ಬಹಿರಂಗ

ಈ ಸುದ್ದಿಯನ್ನು ಶೇರ್ ಮಾಡಿ

Pakistan--01

ವಾಷಿಂಗ್ಟನ್, ಮೇ 25-ಸದಾ ಹಗೆತನದ ವಿಷಕಾರುವ ಪಾಕಿಸ್ತಾನವು ಭಾರತದ ಮೇಲೆ ದಾಳಿ ನಡೆಸಲು ಅಫ್ಘಾನಿಸ್ತಾನದ ತಾಲಿಬಾನ್ ಭಯೋತ್ಪಾದಕರನ್ನು ಸಜ್ಜುಗೊಳಿಸುತ್ತಿರುವ ಆತಂಕಕಾರಿ ಸಂಗತಿಯೊಂದು ಬಹಿರಂಗಗೊಂಡಿದೆ. ಗಡಿ ಭಾಗದಲ್ಲಿ ಪಾಕ್ ಉಗ್ರರಿಗೆ ಭಾರತೀಯ ಸೇನಾಪಡೆಗಳು ಬಿಸಿ ಮುಟ್ಟಿಸುತ್ತಿರುವುದರಿಂದ ಅಫ್ಘನ್ ಉಗ್ರರ ನೆರವು ಪಡೆಯುತ್ತಿರುವ ಕುತಂತ್ರವನ್ನು ಅಮೆರಿಕ ಗುಪ್ತಚರ ಇಲಾಖೆ ಬಯಲು ಮಾಡಿದೆ.

ಜಾ ಗತಿಕ ಆತಂಕಗಳು ಮತ್ತು ಬೆದರಿಕೆಗಳ ಕುರಿತ ವಿಚಾರಣೆ ವೇಳೆ, ಅಮೆರಿಕ ರಕ್ಷಣಾ ಗುಪ್ತಚರ ಸಂಸ್ಥೆಯ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿನ್ಸೆಂಟ್ ಸ್ಟೀವರ್ಟ್ ಈ ವಿಷಯ ತಿಳಿಸಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ. ಅಲ್ಲದೇ ಅವರನ್ನು ದುಷ್ಟ ಉದ್ದೇಶಗಳಿಗಾಗಿ ಅಫ್ಘನ್‍ನಲ್ಲಿ ಮೀಸಲು ಆಗಿ ಬಳಸುತ್ತಿದೆ. ಈ ದುರುದ್ದೇಶಗಳಲ್ಲಿ ಭಾರತದ ಮೇಲೆ ದಾಳಿ ನಡೆಸುವುದೂ ಸಹ ಮುಖ್ಯವಾಗಿದೆ ಎಂದು ಅವರು ಪ್ರಭಾವಿ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ.ಅಫ್ಘಾನಿಸ್ತಾನದಲ್ಲಿ ಭಾರತದ ಹೆಚ್ಚಿನ ಪ್ರಭಾವನ್ನು ಪಾಕಿಸ್ತಾನ ಬಯಸುವುದಿಲ್ಲ. ಇದಕ್ಕಾಗಿ ಅನೇಕ ಕುತಂತ್ರಗಳನ್ನೂ ರೂಪಿಸುತ್ತಿದೆ. ಅಫ್ಘನ್‍ನಲ್ಲಿ ಅಸ್ಥಿರತೆ ಸೃಷ್ಟಿಸಿ, ತಾಲಿಬಾನ್ ಮತ್ತು ಪಾಕಿಸ್ತಾನ ಪರವಾಗಿರುವ ಉಗ್ರರ ಅಧಿಪತ್ಯದ ಸರ್ಕಾರ ರಚನೆಗೆ ಬೆಂಬಲ ನೀಡುವುದು ಪಾಕಿಸ್ತಾನದ ಗುರಿಯಾಗಿದೆ ಎಂದು ವಿನ್ಸೆಂಟ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin