ಭಾರತದ ಮೇಲೆ ದಾಳಿಗೆ ಅಪ್ಪಣೆ ಕೊಡಿ : ಪಾಕ್ ಸರ್ಕಾರಕ್ಕೆ ಉಗ್ರ ಮಸೂದ್ ಅಜರ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Masood-Axer

ನವದೆಹಲಿ, ಅ.13-ಭಾರತದ ಮೇಲೆ ಮತ್ತೆ ಫೂತ್ಕರಿಸುತ್ತಾ ವಿಷ ಕಾರಿರುವ ಜೈಷ್-ಇ-ಮಹಮದ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮತ್ತು ಪಠಾಣ್ಕೋಟ್ ದಾಳಿಯ ಸೂತ್ರಧಾರ ಮಸೂದ್ ಅಜರ್, ಭಯೋತ್ಪಾದನೆ ಆಕ್ರಮಣಗಳನ್ನು ನಡೆಸಲು ದಾರಿ ಮಾಡಿಕೊಡುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾನೆ.  ಅಲ್ಲದೇ ಕಾಶ್ಮೀರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಲಭಿಸಿರುವ ಅವಕಾಶ ಸದುಪಯೋಗ ಮಾಡಿಕೊಳ್ಳುವಂತೆಯೂ ಕುಯುಕ್ತಿಯ ಸಲಹೆ ನೀಡಿದ್ದಾನೆ.  ಭಯೋತ್ಪಾದನೆಯನ್ನು ದಮನ ಮಾಡುವಂತೆ ವಿಶ್ವಸಂಸ್ಥೆ ಸೇರಿದಂತೆ ನಾನಾ ದೇಶಗಳು ಪಾಕಿಸ್ತಾನವನ್ನು ಒಕ್ಕೊರಲಿನಿಂದ ಆಗ್ರಹಿಸುತ್ತಿರುವಾಗಲೇ, ಮಸೂದ್ ನೀಡಿರುವ ಈ ಹೇಳಿಕೆ ಇಸ್ಲಾಮಾಬಾದ್ನನ್ನು ಇನ್ನಷ್ಟು ಪೇಚಿಗೆ ಸಿಲುಕಿಸಿದೆ.

ಕಣಿವೆ ರಾಜ್ಯ ಕಾಶ್ಮೀರದಲ್ಲಿ ನಮ್ಮ ದಾಳಿಯು ಭಾರತವನ್ನು ದೊಡ್ಡ ಮಟ್ಟದಲ್ಲಿ ದುರ್ಬಲಗೊಳಿಸಿದ್ದು, ಮುಜÁಹಿದೀನ್ಗಳು ಮತ್ತೆ ಆಕ್ರಮಣಗಳನ್ನು ನಡೆಸಲು ದಾರಿ ಮಾಡಿಕೊಡಬೇಕು ಎಂದು ಜೈಷ್ನ ಸಾಪ್ರಾಹಿಕ ಅಲ್ ಖಲಾಂನ ಸಂಪಾದಕೀಯದಲ್ಲಿ ಮಸೂದ್ ಪಾಕ್ ಸರ್ಕಾರ ಮತ್ತು ಪ್ರಧಾನಿ ನವಾಜ್ ಷರೀಫ್ರನ್ನು ಒತ್ತಾಯಿಸಿದ್ದಾನೆ.  ಕಾಶ್ಮೀರದಲ್ಲಿ ಜಿಹಾದ್ಗೆ ಮುನ್ನ ಮತ್ತು ನಂತರ ಭಾರತದ ಸ್ಥಿತಿಯನ್ನು ಗಮನಿಸಿ. ಈ ಪಯಣದಲ್ಲಿ ಭಾರತದ ಸಾಮಥ್ರ್ಯವು ಸರ್ಪದಿಂದ ಮಣ್ಣುಹುಳುವಿಗೆ ಕುಸಿದಿದೆ ಎಂದು ಮಸೂದ್ ಟೀಕಿಸಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin