ಭಾರತದ ಮೇಲೆ ದಾಳಿಗೆ ಎಲ್‍ಒಸಿ ಬಳಿ ಸಜ್ಜಾಗಿದ್ದಾರೆ 100ಕ್ಕೂ ಹೆಚ್ಚು ಭಯೋತ್ಪಾದಕರು..!

ಈ ಸುದ್ದಿಯನ್ನು ಶೇರ್ ಮಾಡಿ

Terrorist

ನವದೆಹಲಿ, ಅ.5-ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆಗಳು ಕೈಗೊಂಡ ಉಗ್ರರ ಸಂಹಾರ ಕಾರ್ಯಾಚರಣೆಗೆ ಪ್ರತೀಕಾರವಾಗಿ ದಾಳಿ ನಡೆಸಲು 100ಕ್ಕೂ ಹೆಚ್ಚು ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಸಮೀಪ ಸಜ್ಜಾಗಿದ್ದಾರೆ ಎಂದು ಬೇಹುಗಾರಿಕೆ ಸಂಸ್ಥೆಗಳು ಹೇಳಿವೆ.  ಭಾರತ ಮತ್ತು ಪಾಕಿಸ್ತಾನದ ನಡುವೆ ಬಿಗಡಾಯಿಸಿರುವ ಉದ್ವಿಗ್ನತೆಯನ್ನು ಉಪಶಮನಗೊಳಿಸಲು ಅಮೆರಿಕ, ರಷ್ಯಾ ಸೇರಿದಂತೆ ಅನೇಕ ದೇಶಗಳು ಪ್ರಯತ್ನಿಸುತ್ತಿರುವಾಗಲೇ ಒಂದೆಡೆ ಪಾಕಿಸ್ತಾನಿ ಸೇನಾಪಡೆಗಳು ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಭಾರತದೊಳಗೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಎಲ್‍ಓಸಿ ಬಳಿ ಅನೇಕ ನೆಲೆಗಳಿಂದ ಭಾರತದೊಳಗೆ ನುಗ್ಗಿ ಬುಡಮೇಲು ಕೃತ್ಯಗಳನ್ನು ನಡೆಸಲು 100ಕ್ಕೂ ಹೆಚ್ಚು ಉಗ್ರರು ಸಜ್ಜಾಗಿದ್ದಾರೆ.. ಪಾಕಿಸ್ತಾನಿ ಯೋಧರು ಸತತವಾಗಿ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿಗಳನ್ನು ನಡೆಸಿ ಭಾರತೀಯ ಯೋಧರ ಗಮನವನ್ನು ಬೇರೆಡೆ ಸೆಳೆದು ಉಗ್ರರನ್ನು ಗಡಿಯೊಳಗೆ ನುಸುಳಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಎಲ್‍ಓಸಿ ಮತ್ತು ಐಬಿ (ಅಂತಾರಾಷ್ಟ್ರೀಯ ಗಡಿ) ಬಳಿ ಉದ್ವಿಗ್ನ ಸ್ಥಿತಿ ಇದೆ. ವಿಶೇಷವಾಗಿ ಜಮ್ಮು, ಪಂಜÁಬ್, ರಾಜಸ್ತಾನ ಮತ್ತು ಗುಜರಾತ್ ಗಡಿ ಭಾಗಗಳಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸಲು ಗಡಿ ಭದ್ರತಾ ಪಡೆ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ಬಿಎಸ್‍ಎಫ್ ಮಹಾ ನಿರ್ದೇಶಕ ಕೆ.ಕೆ.ಶರ್ಮ ಹೇಳಿದ್ದಾರೆ.

ಗಡಿ ಪ್ರದೇಶದ ಬಳಿ ಮಾನವರಹಿತ ವೈಮಾನಿಕ ವಾಹನ (ಯುಎವಿ) ಹಾರಾಟ ಕಂಡುಬಂದಿದೆಯಾದರೂ, ಆತಂಕಪಡುವ ಅಗತ್ಯವಿಲ್ಲ. ಯಾವುದೇ ಸನ್ನಿವೇಶ ಎದುರಿಸಲು ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ ಎಂದು ಅವರು ವಿಶ್ವಾಸದಿಂದ ನುಡಿದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin