ಭಾರತದ ಮೇಲೆ ಮತ್ತೆ ವಿಷ ಕಾರಿದ ಹಫೀಜ್

ಈ ಸುದ್ದಿಯನ್ನು ಶೇರ್ ಮಾಡಿ

Hafeex

ಇಸ್ಲಾಮಾಬಾದ್, ಆ.17-ಕಾಶ್ಮೀರಕ್ಕೆ ಸೇನಾಪಡೆಗಳನ್ನು ರವಾನಿಸುವಂತೆ ಪಾಕಿಸ್ತಾನಿ ಸೇನೆಗೆ ಕರೆ ನೀಡಿರುವ ಜಮಾಯತ್-ಉದ್-ದವ್ಹಾ (ಜೆಯುಡಿ) ಭಯೋತ್ಪಾದನೆ ಸಂಘಟನೆ ಮುಖ್ಯಸ್ಥ ಮತ್ತು 26/11ರ ಉಗ್ರರ ದಾಳಿಯ ಸೂತ್ರಧಾರಿ ಹಫೀಜ್ ಮಹಮದ್ ಸಯೀದ್, ಭಾರತದ ವಿರುದ್ಧ ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾನೆ.  ಪಾಕಿಸ್ತಾನ ನಿಷೇಧ ಹೇರಿದರೂ ಮತ್ತೆ ಟೆಲಿವಿಷನ್‍ನಲ್ಲಿ ಪ್ರತ್ಯಕ್ಷನಾದ ಜೆಯುಡಿ ನಾಯಕ ಹಫೀಜ್, ಭಾರತದ ವಿರುದ್ಧ ವಾಗ್ದಾಳಿ ನಡೆಸಿ ಮತ್ತೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡಿದ್ದಾರೆ.  ಈ ವರ್ಷದಲ್ಲಿ 10 ಬಾರಿ ಟೆಲಿವಿಷನ್‍ನಲ್ಲಿ ಕಾಣಿಸಿಕೊಂಡ ಹಫೀಜ್, ಅಷ್ಟೂ ಸಲವೂ ತನ್ನ ಭಾಷಣದ ಬಹುಪಾಲು ಭಾಗವನ್ನು ಭಾರತದ ಮೇಲಿನ ಹಗೆತನಕ್ಕೆ ಮೀಸಲಿಟ್ಟಿದ್ದಾನೆ. ಹಫೀಜ್ ಮತ್ತು ಜೆಯುಡಿ ಪ್ರತಿನಿಧಿಗಳ ಮೇಲೆ ಪಾಕಿಸ್ತಾನ ಸರ್ಕಾರ ವಿಧಿಸಿದ್ದ ನಿಷೇಧವನ್ನು ಅನಧಿಕೃತವಾಗಿ ತೆರವುಗೊಳಿಸಿದ್ದರಿಂದ ಈಗ ಮತ್ತೆ ಟಿವಿಯಲ್ಲಿ ಕಾಣಿಸಿಕೊಂಡು ಭಾರತದ ವಿರುದ್ಧ ವಿಷ ಕಾರುತ್ತಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin