ಭಾರತದ ವಿರುದ್ಧ ಹೋರಾಟಕ್ಕೆ ಹಪೀಜ್ ಜೊತೆ ಬುರ್ಹಾನ್ ವಾನಿ ನಡೆಸಿರುವ ಆಡಿಯೋ ಬಹಿರಂಗ

ಈ ಸುದ್ದಿಯನ್ನು ಶೇರ್ ಮಾಡಿ

Wani-01

ಕಾಶ್ಮೀರ ಡಿ.02 : ಹಿಜ್ಬುಲ್ ಮುಜಾಹೀದ್ದೀನ್ ಮುಖಂಡ ಬುರ್ಹಾನ್ ವಾನಿ, ಲಷ್ಕರ್ ಎ-ತೊಯ್ಬಾ ಮುಖಂಡ ಹಾಗೂ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಪೀಜ್ ಸಯೀದ್ ಜೊತೆ ಮಾತನಾಡಿರುವ ಸ್ಫೋಟಕ ಅಡಿಯೋ ಟೇಪ್ ಹೊರಬಿದ್ದಿದೆ, ಈ ಟೇಪ್ ನಲ್ಲಿ ಭಾರತ ಮೇಲೆ ಒಟ್ಟಿಗೆ ದಾಳಿ ನಡೆಸಿ ಮರ್ಮಾಘಾತ ನೀಡೋಣ ಎಂದು ಮಾತನಾಡಿರುವ ಆಘಾತಕಾರಿ ಅಂಶವನ್ನು ಭಾರತದ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದೆ. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಜನರು ತುಂಬಾ ಕಷ್ಟದಿಂದ ಜೀವನ ನಡೆಸುತ್ತಿದ್ಧಾರೆ. ಇದರ ಬಗ್ಗೆ ಚಿಂತೆ ಬೇಡ, ಭಾರತದಲ್ಲಿ ವಿಧ್ವಂಶಕ ಕೃತ್ಯಗಳನ್ನು ನಡೆಸಿ ಹೆಚ್ಚಿನ ಆಘಾತ ನೀಡಬೇಕು, ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ನಾನು ಒದಗಿಸುತ್ತೇನೆ ಹೀಗಾಗಿ ನಿನಗೆ ಯಾವಾಗ ಬೇಕಾದರೂ ಸಹಾಯ ಕೇಳು ನಾನು ಸಹಾಯ ಮಾಡುತ್ತೇನೆ ಎಂದು ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಕುಳಿತು ಬುರ್ಹಾನ್ ವಾನಿ ಜತೆ ಮಾತನಾಡಿದ್ದೇನೆ.

ಬಳಿಕ ಇನ್ನೊಂದು ಟೇಫ್‍ನಲ್ಲಿ ಇಂತಹ ಅವಕಾಶಗಳವನ್ನು ಕಳೆದುಕೊಳ್ಳವುದಿಲ್ಲ, ಶತ್ರು ರಾಷ್ಟ್ರ ಭಾರತವನ್ನು ಧ್ವಂಶ ಮಾಡಿ ಸೇಡು ತೀರಿಸಿಕೊಳ್ಳುತ್ತೇನೆ, ನನಗೆ ಶಸ್ತ್ರಾಸ್ತ್ರಗಳು ಬೇಕು ಒಟ್ಟಿಗೆ ಸೇರಿ ಭಾರತ ಮೇಲೆ ದಾಳಿ ನಡೆಸಿ ಭಾರೀ ಆಘಾತ ನೀಡೋಣ, ಕಾಶ್ಮೀರದಲ್ಲಿರುವ ನಿಮ್ಮ ಸಂಘಟನೆಯ ಸದಸ್ಯರಗಳಿಗೆ ಶಸ್ತ್ರಾಸ್ತ್ರಗಳು ಮತ್ತು ಹಣ ನೀಡಬೇಕು ಎಂದು ವಾನಿ, ಸಯೀದ್ ಜೊತೆ ಮಾತನಾಡಿರುವ ಅಡಿಯೋವನ್ನು ಭಾರತದ ಗುಪ್ತಚರ ಸಂಸ್ಥೆ ಬಹಿರಂಗಪಡಿಸಿದೆ.

ವಾನಿ ಮತ್ತು ಹಫೀಜ್ ಮಾತನಾಡಿರುವ ಸಂಭಾಷಣೆಯ ಆಡಿಯೋ ಟೇಫ್ ಹೀಗಿದೆ.
ವಾನಿ: ನಮಸ್ಕಾರ
ಕಾಲರ್: ಹಫೀಜ್ ಸಯೀದ್ ಜೊತೆ ಮಾತನಾಡಿ
ವಾನಿ: ಸಲಾಂ ವಲೀಕಂ, ಹೇಗಿದ್ದೀರಾ?
ಹಫೀಜ್ ಸಯೀದ್: ಎಲ್ಲಾ ಚನ್ನಾಗಿದೆ, ಬುರ್ಹಾನ್ ಮಾತನಾಡುತ್ತಿರುವುದು?
ವಾನಿ: ಹೌದು, ನಾನು ಬುರ್ಹಾನಿ, ಚನ್ನಾಗಿದ್ದೀರಲ್ಲಾ?
ಸಯೀದ್: ಹೌದು, ನಾನು ಚನ್ನಾಗಿದ್ದೀನಿ, ದೇವರ ಕರುಣೆ, ನಿನ್ನಗೆ ಶಕ್ತಿ ಕೊಡಲಿ ಎಂದು ದೇವರ ಹತ್ತಿರ ಕೇಳಿ ಕೊಳ್ಳುತ್ತಿದ್ದೇನೆ. ದೇಶಕ್ಕಾಗಿ ಹೋರಾಡಲು ನಿನಗೆ ಬಲ ಕೊಡಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದೇನೆ.
ವಾನಿ: ನಿಮ್ಮ ಜತೆ ಮಾತನಾಡಬೇಕು ಎಂದು ದೇವರ ಬಳಿ ಕೇಳುತ್ತಿದ್ದೆ, ಇಂದು ನನಗೆ ಅವಕಾಶ ಸಿಕ್ಕಿದೆ. ನಿಮ್ಮ ಆರೋಗ್ಯ ಹೇಗಿದೆ.
ಹಫೀಜ್ ಸಯೀದ್: ಹೌದು, ನಾನು ಚನ್ನಾಗಿದ್ದೀನಿ, ದೇವರ ಆಶೀವಾದಿಂದ ಪ್ರತಿಯೊಂದು ಚನ್ನಾಗಿ ಹೋಗುತ್ತಿದೆ. ನಮ್ಮ ಜನರು ತುಂಬಾ ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ನಿನಗೆ ಏನಾದರೂ ಬೇಕಾದರೆ ನನ್ನ ಸಹಾಯ ಕೇಳು. ಪ್ರತಿಯೊಂದಕ್ಕೂ ಸಹಾಯ ಮಾಡುತ್ತೇನೆ. ಶತ್ರುಗಳ ವಿರುದ್ಧ ಜಯ ಸಾಧಿಸಲು ಮತ್ತು ಹೋರಾಡಲು ಶಕ್ತಿ ಕೊಡಲಿ ಎಂದು ದೇವರ ಹತ್ತಿರ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದು ಹೇಳಿದ್ದನು.
ವಾನಿ: ಅಲ್ಲಾ ಕೃಪೆ, ನಾನು ಮಾಡುವುದಕ್ಕೆ ಸಿದ್ದನಿದ್ದೇನೆ, ಆದರೆ ನಿಮ್ಮ ಆಶೀವಾದ ಬೇಕು, ದೇವರ ನನ್ನ ಬಯಕೆ ಹಾರೈಸಿದ್ದು, ಇಲ್ಲಿನ ಜನರು ನಿಮ್ಮ ಜೊತೆ ಮಾತನಾಡಿ ಅಂತಾ ಹೇಳುತ್ತಿದ್ಧಾರೆ.
ಸಯೀದ್: ಯು ಆರ್ ಡುಯಿಂಗ್ ಗ್ರೇಟ್ ವರ್ಕ್, ನೀನು ಮಾಡುತ್ತಿರುವ ಕೆಲಸದ ಚಟುವಿಟಕೆಗಳ ಬಗ್ಗೆ ನನಗೆ ಗೊತ್ತಿದೆ. ನಾನು ನೀನ್ನ ಜತೆ ಸಂತೋಷವಾಗಿರಲು ಇಷ್ಟಪಡುತ್ತೇನೆ.
ವಾನಿ: ನಾನು ರೀಕ್ಚೇಸ್ಟ್ ಮಾಡಿಕೊಳ್ಳಬಹುದಾ, ಕಾಶ್ಮೀರದಲ್ಲಿ ನಿಮ್ಮ ಸಂಘಟನೆ ಸದಸ್ಯರು ತುಂಬಾ ಕಷ್ಟಪಡುತ್ತಿದ್ದಾರೆ. ಅವರ ಬಳಿ ಹಣ ಇಲ್ಲ. ಅವರಿಗೆ ಏನಾದರೂ ಸಹಾಯ ಮಾಡಬೇಕು ಅನುಸುತ್ತಿದೆ. ನೀವು ಓಕೆ ಹೇಳಿದರು ನಾನು ಸಹಾಯ ಮಾಡುತ್ತೇನೆ ಎಂದ.
ಹಫೀಜ್ ಸಯೀದ್: ಗ್ರೇಟ್, ಗ್ರೇಟ್, ನಾನು ಖಂಡಿತವಾಗಿಯೂ ನಿನ್ನ ಸಹಾಯ ಕೇಳುತ್ತೇನೆ. ನಿನಗೆ ಒಳ್ಳೆಯದಾಗಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡುತ್ತೇನೆ.
ವಾನಿ: ನಮ್ಮನ್ನು ಶತ್ರುಗಳು ಸೋಲಿಸುತ್ತಿದ್ದಾರೆ. ನಾವೆಲ್ಲಾ ಎಲ್ಲ ಸೇರಿ ಹೋರಾಟ ಮಾಡಬೇಕು. ನಮ್ಮಗೆ ಶಾಸ್ತ್ರಾಸ್ತ್ರ ಹಾಗೂ ನಿಮ್ಮ ಸಹಾಯ ಬೇಕು. ದುಜಾನಾ ಜೊತೆ ಈಗಾಗಲೇ ಮಾತನಾಡಿದ್ದೇನೆ. ಹಿಜ್ಬುಲ್ ಮತ್ತು ಲಷ್ಕರ್ ಒಟ್ಟಿಗೆ ಸೇರಿ ಶತ್ರುಗಳ ಮೇಲೆ ದಾಳಿ ನಡೆಸಿ, ನಮ್ಮ ಜಾಗದಿಂದ ಶತ್ರುಗಳನ್ನು ಓಡಿಸಬೇಕು.
ಹಫೀಜ್ ಸಯೀದ್: ಅಲ್ಲಾ, ಅಲ್ಲಾ, ಎಲ್ಲಾ ಬ್ರಥರ್ರ್ಸ್ ಮತ್ತು ಸಿಸ್ಟರ್ರ್ಸ್‍ಗಳಿಗೆ ಶುಭಾಶಯ ತಿಳಿಸಿ. ನಾವು ಒಂದೇ ಉದ್ದೇಶಕ್ಕೆ ಕೆಲಸ ಮಾಡಬೇಕು. ಅವರಿಗೆ ಹೇಳಿ ಪ್ರತಿಯೊಬ್ಬರಿಗೆ ಒಳ್ಳೆಯದಾಗಲಿ ಎಂದು ದೇವರ ಹತ್ತಿರ ಪ್ರಾರ್ಥನೆ ಮಾಡುತ್ತಿದ್ದೇನೆ.
ವಾನಿ: ಐ ಯಾಮ್ ಗ್ರೇಟ್ ಪುಲ್. ನಾನು ಎಲ್ಲ ಕೆಲಸ ಮಾಡುವುದಕ್ಕೆ ಸಿದ್ದೇನಿದ್ದಾನೆ. ಆದರೆ ನಿಮ್ಮಸಹಾಯ ಬೇಕು
ಸಯೀದ್: ಅಲ್‍ರೈಟ್, ಇನ್‍ಷಲ್ಲಾ, ಇನ್‍ಷಲ್ಲಾ,
ವಾನಿ: ಲಷ್ಕರ್ ಸದಸ್ಯರು ಹೇಳುತ್ತಿದ್ದಾರೆ, ನಿಮ್ಮ ಜೊತೆ ಮಾತನಾಡುವುದಕ್ಕೆ ಸಿಗುತ್ತಿಲ್ಲ
ಸಯೀದ್: ನಾನೇ ಮಾತನಾಡುತ್ತೇನೆ. ನನಗೆ ನಿಮ್ಮ ಮಸೇಜ್ ಮತ್ತು ಕಾಲ್ ಸಿಕ್ಕಿದೆ. ನೀನು ಅವರ ಜೊತೆ ಸಂಪರ್ಕದಲ್ಲಿ ಇರು.
ವಾನಿ: ಯೆಸ್, ನಾನು ಅವರ ಜೊತೆ ಸಂಪರ್ಕದಲ್ಲಿರುತ್ತೇನೆ. ಅವರನ್ನು ಕೇರ್ ತೆಗೆದುಕೊಳ್ಳುತ್ತೇನೆ
ಸಯೀದ್: ಓಕೆ, ಬಾಯಿ
ವಾನಿ: ಬಾಯ್

ವಾನಿ ಸಾಯುವುದಕ್ಕೆ ಮುನ್ನ ಕೆಲವೇ ದಿನಗಳಲ್ಲಿ ವಾನಿ ಮತ್ತು ಹಫೀಜ್ ಸಯೀದ್ ನಡುವೆ ಸಂಭಾಷಣೆ ನಡೆಸಿದ್ದು, 22 ವರ್ಷದ ವಾನಿಯನ್ನು ಪೊಲೀಸರು ಏನ್‍ಕೌಂಟರ್‍ನಲ್ಲಿ ಶೂಟ್ ಮಾಡಿ ಹತ್ಯೆ ಮಾಡಿದ್ದರು. ಬಳಿಕ ಬುರ್ಹಾನ್ ವಾನಿ ಹತ್ಯೆಯನ್ನು ಖಂಡಿಸಿ ಮೂರು ತಿಂಗಳ ಕಾಲ ಅವರ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸಿದ್ದರು. ವಾನಿ ದೇಶಭಕ್ತ, ಹುತಾತ್ಮನಾಗಿದ್ದೇನೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ನವಾಜ್ ಷರೀಫ್ ವಿಂಡನಾತ್ಮಕ ಹೇಳಿಕೆ ನೀಡಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin