ಭಾರತದ ಹಣ ವಿನಿಮಯ ಸಂಸ್ಥೆಯಯಿಂದ ಯುಎಇ ಗ್ರಾಹಕರಿಗೆ ಲಕ್ಷಾಂತರ ರೂ. ಪಂಗನಾಮ

ಈ ಸುದ್ದಿಯನ್ನು ಶೇರ್ ಮಾಡಿ

Fraud--012

ಅಬುಧಾಬಿ, ಮೇ 31-ಭಾರತ ಮೂಲದ ಹಣ ವಿನಿಮಯ ಸಂಸ್ಥೆಯೊಂದು ಸಂಯುಕ್ತ ಅರಬ್ ಗಣರಾಜ್ಯದ(ಯುಎಇ) ಗ್ರಾಹಕರಿಗೆ ಲಕ್ಷಾಂತರ ರೂ.ಗಳನ್ನು ವಂಚಿಸಿದ್ದು, ಹಣ ಹೂಡಿಕೆ ಮಾಡಿದ್ದವರು ಕಂಗಲಾಗಿದ್ದಾರೆ. ಭಾರತೀಯ ಎ.ಎಸ್ ಸಂಸ್ಥೆ ನಡೆಸುತ್ತಿರುವ ಮನಿ ಎಕ್ಸ್‍ಚೇಂಜ್ ಯುಎಇಯಲ್ಲಿ ಆರು ಶಾಖೆಗಳನ್ನು ಹೊಂದಿದೆ. ಇವುಗಳ ಮೂಲಕ ಹುಟ್ಟೂರುಗಳಲ್ಲಿರುವ ತಮ್ಮ ಮನೆಗಳಿಗೆ ಹಣ ಕಳುಹಿಸಬೇಕಿದ್ದ ವಲಸಿಗರು ಆತಂಕಗೊಂಡಿದ್ದಾರೆ. ಹಣ ಕಳೆದುಕೊಂಡವರಲ್ಲಿ ಭಾರತೀಯರೂ ಸೇರಿದ್ದಾರೆ.ಈಗ ಈ ಹಣ ವಿನಿಮಯ ಸಂಸ್ಥೆಗಳ ಶಾಖಾ ಕಚೇರಿಗಳು ಅನಿರೀಕ್ಷಿತವಾಗಿ ಬಾಗಿಲು ಮುಚ್ಚಿರುವುದು ಗ್ರಾಹಕರು ಕಳವಳಕ್ಕೆ ಕಾರಣವಾಗಿದೆ. ಲಕ್ಷಾಂತರ ದಿರ್ಹಮ್‍ಗಳನ್ನು(ಅರಬ್ ಕರೆನ್ಸಿ) ಸಂಗ್ರಹಿಸಿದ ಬಳಿಕ ಇದರ ಮಾಲೀಕ ಕಚೇರಿಗಳಿಗೆ ಬೀಗ ಜಡಿದು ನಾಪತ್ತೆಯಾಗಿದ್ದಾನೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.   ಕುಟುಂಬಗಳನ್ನು ಬಿಟ್ಟು ಇಲ್ಲಿಗೆ ಬಂದು ಕಷ್ಟಪಟ್ಟು ದುಡಿದು ಗಳಿಸಿದ ಹಣ ರಾತ್ರೋರಾತ್ರಿ ನಾಪತ್ತೆಯಾಗಿದೆ ಎಂದು ಗ್ರಾಹಕರು ದೂರಿದ್ದಾರೆ. ಮನೆ ನಿರ್ಮಾಣಕ್ಕಾಗಿ 25,000 ದಿರ್ಹಮ್‍ಗಳನ್ನು (4 ಲಕ್ಷ 40 ಸಾವಿರ ರೂ.ಗಳು) ಊರಿಗೆ ಕಳುಹಿಸಿರುವ ಕೇರಳದ ವ್ಯಕ್ತಿಯೊಬ್ಬರು, ನನ್ನ ಒಂದು ವರ್ಷದ ಉಳಿತಾಯವನ್ನು ಕಳೆದುಕೊಂಡಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ.

ಇದು ಇವರೊಬ್ಬರ ವ್ಯಥೆಯಲ್ಲ, ಹಲವು ಮಂದಿ ಇದೇ ರೀತಿ ವಂಚನೆಗೆ ಒಳಗಾಗಿದ್ದಾರೆ.   ಈ ಸಂಸ್ಥೆಯ ಅಬುಧಾಬಿಯಲ್ಲಿರುವ ಎರಡು, ದುಬೈನಲ್ಲಿರುವ ಮೂರು ಹಾಗೂ ಶಾಜರ್ ದಲ್ಲಿರುವ ಒಂದು ಶಾಖೆ ಮುಚ್ಚಲ್ಟಟ್ಟಿದೆ. ಗ್ರಾಹಕರ ದೂರುಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗೆ ಬಲೆ ಬೀಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin