ಭಾರತದ 439 ಮೀನುಗಾರರನ್ನು ಬಿಡುಗಡೆಗೆ ಮಾಡಲು ನಿರ್ಧರಿಸಿದ ಪಾಕ್
ಇಸ್ಲಾಮಾಬಾದ್, ಡಿ. 22-ಭಾರತೀಯ ಸಿನಿಮಾಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದ ಬೆನ್ನಲ್ಲೇ ಪಾಕಿಸ್ತಾನವು ತನ್ನ ವಶದಲ್ಲಿರುವ 439 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ. ಇದರೊಂದಿಗೆ ಭಾರತದೊಂದಿಗೆ ಸಂಬಂಧ ಸುಧಾರಣೆಗೆ ಪಾಕ್ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಭಾರತ-ಪಾಕಿಸ್ತಾನ ಜಲಗಡಿ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ 439 ಭಾರತೀಯ ಬೆಸ್ತರು ಪಾಕಿಸ್ತಾನದ ವಶದಲ್ಲಿದ್ದಾರೆ. ಇದೀಗ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆದೇಶದ ಮೇರೆಗೆ ಅವರೆಲ್ಲರನ್ನೂ ಬಂಧಮುಕ್ತಗೊಳಿಸಲು ಪಾಕ್ ನಿರ್ಧರಿಸಲಾಗಿದೆ.
ಮೊದಲ ತಂಡದಲ್ಲಿ 220 ಮೀನುಗಾರರನ್ನು ಡಿ.25ರಂದು ಹಾಗೂ ಎರಡನೇ ತಂಡದಲ್ಲಿ 219 ಬೆಸ್ತರನ್ನು ಬಿಡುಗಡೆಗೊಳಿಸಲಾಗುವುದು ಎಂದು ಪಾಕಿಸ್ತಾನ ತಿಳಿಸಿದೆ. ಭಾರತೀಯ ಸಿನಿಮಾಗಳ ಮೇಲೆ ವಿಧಿಸಲಾಗಿದ್ದ ದೀರ್ಘಕಾಲದ ನಿರ್ಬಂಧವನ್ನು ಪಾಕಿಸ್ತಾನ ಈಗಾಗಲೇ ತೆಗೆದು ಹಾಕಿದೆ. ಕಾಶ್ಮೀರ ಕಣಿವೆಯ ಉರಿಯಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ನಂತರ ಉಭಯ ದೇಶಗಳ ಸಂಬಂಧ ಹಳಸಿತ್ತು. ಸೆಪ್ಟೆಂಬರ್ನಿಂದಲೂ ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳನ್ನು ಅದರಲ್ಲೂ ಹಿಂದಿ ಚಿತ್ರಗಳಿಗೆ ನಿಷೇಧ ಹೇರಲಾಗಿತ್ತು. ಈಗ ಆ ನಿರ್ಬಂಧ ತೆರವುಗೊಳಿಸಲು ಪಾಕ್ ನಿರ್ಧರಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅಲ್ಲಿನ ಚಿತ್ರಮಂದಿಗಳ ಮಾಲೀಕರು ಬಾಲಿವುಡ್ ಚಿತ್ರಗಳನ್ನು ಪ್ರದರ್ಶಿಸಲು ಅವಕಾಶ ನೀಡಿದ್ದಾರೆ.
Eesanje News 24/7 ನ್ಯೂಸ್ ಆ್ಯಪ್ – Click Here to Download