ಭಾರತವು ನಮ್ಮ ಮೇಲೆ ದಾಳಿ ಮಾಡಿದರೆ ಅಣ್ವಸ್ತ್ರ ಬಳಕೆಗೂ ಸಿದ್ಧ : ಪಾಕ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Pak

ಇಸ್ಲಾಮಾಬಾದ್, ಸೆ.29-ಭಾರತವು ತನ್ನ ಮೇಲೆ ದಾಳಿ ಮಾಡಿದ್ದೇ ಆದಲ್ಲಿ ಅಣ್ವಸ್ತ್ರಗಳನ್ನು ಬಳಸಲು ಹಿಂಜರಿಯುವುದಿಲ್ಲ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ. ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕರ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಸಂಬಂಧ ಹದಗೆಡುತ್ತಿರುವಾಗಲೇ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮಹಮದ್ ಆಸೀಫ್ ನೀಡಿರುವ ಈ ಹೇಳಿಕೆ ವಿಶ್ವ ನಾಯಕರನ್ನು ಮತ್ತಷ್ಟು ಕೆರಳಿಸಿದೆ.  ನಮ್ಮ ಮೇಲೆ ದಾಳಿ ನಡೆದರೆ ನಾವು ಭಾರತಕ್ಕೆ ವಿನಾಶಕಾರಿಯಾಗುತ್ತೇವೆ. ಅಣ್ವಸ್ತ್ರಗಳನ್ನು ಬಳಸಲು ನಾವು ಹಿಂಜರಿಯುವುದಿಲ್ಲ. ನಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳು ಪ್ರದರ್ಶನದ ಗೊಂಬೆಗಳಲ್ಲ. ಅನಿವಾರ್ಯವಾದರೆ ಅತ್ಯಂತ ಅಪಾಯಕಾರಿ ಅಸ್ತ್ರಗಳನ್ನೂ ನಾವು ಪ್ರಯೋಗಿಸುತ್ತೇವೆ ಎಂದು ಆಸೀಫ್ ಇಸ್ಲಾಮಾಬಾದ್‍ನಲ್ಲಿ ಟೆಲಿವಿಷನ್ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತ ನಮ್ಮ ಮೇಲೆ ನಡೆಸಬಹುದಾದ ಯಾವುದೇ ದಾಳಿಗೆ ಪ್ರತ್ಯುತ್ತರ ಕೊಡಲು ನಮ್ಮ ಸೇನಾಪಡೆಗಳು ಸಂಪೂರ್ಣ ಸನ್ನದ್ಧವಾಗಿವೆ ಎಂದು ತಿಳಿಸಿದ್ದಾರೆ.  ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮಗಳ ಬಗ್ಗೆ ವಿಶ್ವಸಂಸ್ಥೆ ಮತ್ತು ಅಮೆರಿಕ ಈಗಾಗಲೇ ತೀವ್ರ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಹೇಳಿಕೆಗೆ ಖಂಡನೆಗಳು ವ್ಯಕ್ತವಾಗುತ್ತಿವೆ.

► Follow us on –  Facebook / Twitter  / Google+

Facebook Comments

Sri Raghav

Admin