ಭಾರತೀಯರಲ್ಲಿ ಬೃಹತ್ತಾಗಿ ಕಾಡುತ್ತಿರುವ ಮಧುಮೇಹ

ಈ ಸುದ್ದಿಯನ್ನು ಶೇರ್ ಮಾಡಿ

diabits
ಬೆಂಗಳೂರು,ನ.14- ಮಧುಮೇಹ ಬೃಹತ್ತಾದ ಮತ್ತು ಬೆಳೆಯುತ್ತಿರುವ ಹೊರೆಯಾಗಿದ್ದು, 2015ರಲ್ಲಿ 69 ದಶಲಕ್ಷ ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು 2040ರ ವೇಳೆಗೆ ಈ ಸಂಖ್ಯೆಯು 100 ದಶಲಕ್ಷಗಳಿಗೆ ಅಥವಾ 10 ವಯಸ್ಕರಲ್ಲಿ ಒಬ್ಬರಿಗೆ ಎಂಬ ಸಂಖ್ಯೆಗೆ ಏರುವ ನಿರೀಕ್ಷೆಯಿದೆ.ಭಾರತೀಯರು ಸಣ್ಣ ವಯಸ್ಸಿನಲ್ಲಿಯೇ ಮತ್ತು ಕಡಿಮೆ ಬಾಡಿ ಮಾಸ್ ಇಂಡೆಕ್ಸ್‍ನಲ್ಲಿ ಟೈಪ್ 2 ಮಧುಮೇಹಕ್ಕೆ ತುತ್ತಾಗುವ ಅಂಶ ಕಂಡುಬಂದಿದೆ. 2014ರಲ್ಲಿ ಪ್ರಕಟಿಸಲಾದ ಪ್ರಯೋಗದಿಂದ ತಿಳಿದುಬಂದ ಸಂಗತಿಯೆಂದರೆ ಭಾರತದಲ್ಲಿ ಶೇ.46 ಅಂದರೆ ಟೈಪ್2 ಮಧುಮೇಹದಿಂದ ಬಳಲುವ ರೋಗಿಗಳಲ್ಲಿ ಅರ್ಧದಷ್ಟು ಜನ 40 ವರ್ಷ ವಯಸ್ಸಿಗಿಂತ ಚಿಕ್ಕವರಾಗಿರುತ್ತಾರೆ.
ಟೈಪ್2 ಮಧುಮೇಹದಿಂದ ಬಳಲುವ ಯುವ ರೋಗಿಗಳು ಹೃದ್ರೋಗಕ್ಕೆ ಒಳಗಾಗುವ ಸಾಧ್ಯತೆಯು ಬಹಳ ಹೆಚ್ಚಾಗಿದ್ದು, ಸಣ್ಣ ವಯಸ್ಸಿನಲ್ಲಿಯೇ ಮಧುಮೇಹದ ಜಟಿಲತೆಗಳನ್ನು ಬೆಳೆಸಿಕೊಳ್ಳುವಂತಹ ಅಪಾಯವು ಹಿರಿಯರಿಗಿಂತ ಹೆಚ್ಚಾಗಿರುತ್ತದೆ. ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಎಂಡೋಕ್ರಿನಾಲಜಿಸ್ಟ್ ಡಾ.ಅರ್ಪಣ್ ದೇವ್ ಭಟ್ಟಾಚಾರ್ಯ ಹೇಳುವಂತೆ ಟೈಪ್ 2 ಮಧುಮೇಹದಿಂದ ಬಳಲುವ ಬಹಳಷ್ಟು ಜನರು ತಮ್ಮ ಸ್ಥಿತಿಯ ಅರಿವಿಲ್ಲದೆ ದೀರ್ಘಕಾಲ ಇರುತ್ತಾರೆ. ರೋಗನಿರ್ಣಯವಾಗುವ ವೇಳೆಗೆ, ಮಧುಮೇಹದ ಜಟಿಲತೆಗಳು ಆಗಲೇ ಉಂಟಾಗಿರಬಹುದು. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವ ಮೂಲಕ ಶೇ.70ರಷ್ಟು ಟೈಪ್ 2 ಮಧುಮೇಹವನ್ನು ತಡೆಗಟ್ಟಬಹುದು.
ಕಡಿಮೆ ನಿದ್ದೆ ( 6 ಗಂಟೆ) ಮತ್ತು ಹೆಚ್ಚು ನಿದ್ದೆ ( 9 ಗಂಟೆ) ಎರಡೂ ಟೈಪ್ 2 ಮಧುಮೇಹಕ್ಕೆ ಸಂಬಂಧಿಸಿವೆ. ಕಡಿಮೆ ನಿದ್ರೆಯಿಂದ ಆಹಾರ ಸೇವನೆ ಮತ್ತು ಶಕ್ತಿ ಸಮತೋಲನೆಯನ್ನು ನಿಯಂತ್ರಿಸುವ ಹಾರ್ಮೋನ್‍ಗಳ ಸಮತೋಲನವನ್ನು ಏರುಪೇರು ಮಾಡುತ್ತದೆ.
ಸ್ಥೂಲಕಾಯ ಮತ್ತು ಬಹಳ ಸಾಮಾನ್ಯ ನಿದ್ರೆ-ಕಾರಣದ ಉಸಿರಾಟದ ತೊಂದರೆಯಾದ ಅಬ್ಸ್ಟ್ರಕ್ಟೀವ್ ಸ್ಲೀಪ್ ಆಪ್ನಿಯಾ ಲಕ್ಷಣ ದ ನಡುವೆ ಗಾಢವಾದ ಸಂಬಂಧಿವಿದೆ ಎನ್ನುತ್ತಾರೆ ಡಾ.ಪ್ರಮೀಳಾ ಕಾರ್ಲಾ. ಮಧುಮೇಹದಿಂದ ಬಳಲುವ ಜನರು ನಿಯಮಿತವಾಗಿ ರಕ್ತದ ಸಕ್ಕರೆಯ ಪ್ರಮಾಣದ ಪರೀಕ್ಷೆ ಮಾಡಿಸಿಕೊಂಡು, ಅದನ್ನು ನಿಯಂತ್ರಣದಲ್ಲಿಡಬೇಕು ಮತ್ತು ದೇಹದ ಅಂಗಾಂಗಗಳ, ಅದರಲ್ಲೂ ಕಣ್ಣುಗಳ, ಮೂತ್ರಪಿಂಡಗಳ ಮತ್ತು ಪಾದಗಳ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin