ಭಾರತೀಯರಿಗೆ ಅಮೇರಿಕ ಎಷ್ಟು ಸುರಕ್ಷಿತ..?

ಈ ಸುದ್ದಿಯನ್ನು ಶೇರ್ ಮಾಡಿ

Srinivas-Wife

ಹೌಸ್ಟನ್,ಫೆ.25- ಅಮೆರಿಕದಲ್ಲಿ ನೆಲೆಸಿರುವ ಉದ್ಯೋಗಸ್ಥ ಭಾರತೀಯರಿಗೆ ಆ ನೆಲ ಎಷ್ಟು ಸುರಕ್ಷಿತ ಎಂಬ ಅನುಮಾನ ಕಾಡುತ್ತಿದೆ ಎಂದು ಒಲಾತೆ ನಗರದಲ್ಲಿ ಹಂತಕನ ಗುಂಡಿಗೆ ಬಲಿಯಾದ ಹೈದರಾಬಾದ್‍ನ ಇಂಜಿನಿಯರ್ ಶ್ರೀನಿವಾಸ್ ಕೋಚಿಭೋಟ್ಲ ಅವರ ಪತ್ನಿ ಸುನಯನ ದುಮಾಲ ಆತಂಕ ವ್ಯಕ್ತಪಡಿಸಿದ್ದಾರೆ.  ಹೌಸ್ಟನ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಮೆರಿಕದಲ್ಲಿ ಅಲ್ಪಸಂಖ್ಯಾತರ ವಿರುದ್ದ ನಡೆಯುತ್ತಿರುವ ಜನಾಂಗೀಯ ಅಪರಾಧಗಳನ್ನು ಅಮೆರಿಕ ಸರ್ಕಾರ ತಡೆಯುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.  ನಾವು ಅಮೆರಿಕಾಕ್ಕೆ ಬಂದಾಗ ಇಲ್ಲಿನ ಸುರಕ್ಷತೆ ಬಗ್ಗೆ ನನಗೆ ಆತಂಕವಿತ್ತು. ಇದನ್ನು ನನ್ನ ಪತಿಗೆ ಹೇಳಿದ್ದೆ. ಅದಕ್ಕೆ ಅವರು ಅಮೆರಿಕದಲ್ಲಿ ಉತ್ತಮ ಭವಿಷ್ಯವಿದೆ. ಮುಂದೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಜನಾಂಗೀಯ ದ್ವೇಷವೆಂಬ ಕಿಡಿ ನನ್ನ ಅಮಾಯಕ ಪತಿಯನ್ನು ಬಲಿ ತೆಗೆದುಕೊಂಡಿದೆ ಎಂದು ನೋವಿನಿಂದ ನುಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin