ಭಾರತೀಯರ ರಕ್ಷಣೆಗೆ ಟ್ರಂಪ್ ಸರ್ಕಾರದ ಮೇಲೆ ಕೇಂದ್ರ ಸರ್ಕಾರದಿಂದ ತೀವ್ರ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ನವದೆಹಲಿ/ ವಾಷಿಂಗ್ಟನ್/ಹೌಸ್ಟನ್, ಫೆ.27- ಡೋನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕದಲ್ಲಿ ಚಿಗುರೊಡೆಯುತ್ತಿರುವ ಜನಾಂಗೀಯ ದ್ವೇಷದ ದಳ್ಳುರಿಗೆ ಹೈದರಾಬಾದ್ ಟೆಕ್ಕಿ ಶ್ರೀನಿವಾಸ್ ಕೋಚಿಭೋಟ್ಲಾ ಬಲಿಯಾದ ಬಳಿಕ ಅಲ್ಲಿ ನೆಲೆಸಿರುವ ಭಾರತೀಯರಲ್ಲಿ ಹೆಚ್ಚಾಗಿರುವ ಆತಂಕ ದೂರ ಮಾಡಲು ಭಾರತ ಸರ್ಕಾರ ಮುಂದಾಗಿದೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಲ್ಲಿ ನೈತಿಕ ಸ್ಥೈರ್ಯ ತುಂಬುವ ಮೊದಲ ಹೆಜ್ಜೆಯಾಗಿ ಅಲ್ಲೇ ನೆಲೆಸಿರುವ ತನ್ನ ಪ್ರಜೆಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಟ್ರಂಪ್ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದೆ. ಇನ್ನೊಂದೆಡೆ ಭಾರತೀಯರಲ್ಲಿ ಧೈರ್ಯ ತುಂಬಲು ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ನಾಳೆ ಅಮೆರಿಕಕ್ಕೆ ತೆರಳಲಿದ್ದಾರೆ.

ಕನ್ಯಾಸ್‍ನಂಧ ಕೃತ್ಯಗಳಿಗೆ ಟ್ರಂಪ್ ಸರ್ಕಾರ ಮತ್ತು ಅಮೆರಿಕನ್ ಪ್ರಜೆಗಳು ಆಸ್ಪದ ನೀಡಬಾರದು. ಹಂತಕನ ವಿರುದ್ಧ ಕಠಿಣ ಕ್ರಮ ಕೈಗೊಂಡು ಇಂಥ ಘಟನೆಗಳು ಮರುಕಳಿಸದಂತೆ ಮಾಡಬೇಕು ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಎಂ.ವೆಂಕಯ್ಯನಾಯ್ಡು ಆಗ್ರಹಿಸಿದ್ದಾರೆ.  ಇದೇ ವೇಳೆ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ನಾಳೆ ಅಮೆರಿಕಕ್ಕೆ ತರಳಿ ಎಚ್1ಬಿ ವೀಸಾ ಮತ್ತು ಭಾರತೀಯರ ರಕ್ಷಣೆಗಾಗಿ ಅಮೆರಿಕ ಸರ್ಕಾರದೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಜೈಶಂಕರ್ ಹೌಸ್ ಆಫ್ ರೆಪ್ರೆಸೆಂಟಿವ್‍ನ ಸ್ಪೀಕರ್ ಪೌಲ್‍ರಯಾನ್ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕ ನ್ಯಾನ್ಸಿ ಪೆಲೋಸಿ ಮೊದಲಾದವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಮಾಡಲಿದ್ದಾರೆ.

ಹೌಸ್ಟನ್‍ನಲ್ಲಿ ಮೌನ ಪ್ರತಿಭಟನೆ:

ಶ್ರೀನಿವಾಸ್ ಹತ್ಯೆ ಖಂಡಿಸಿ ನೂರಾರು ಮಂದಿ ಇಂದು ಕನ್ಯಾಸ್ ನಗರದಲ್ಲಿ ಶಾಂತಿ ಮೆರವಣಿಗೆ ಮತ್ತು ಮೌನ ಪ್ರತಿಭಟನೆ ನಡೆಸಿದರು.  ನಮಗೆ ಶಾಂತಿ ಬೇಕು, ನಾವು ಶಾಂತಿಯನ್ನು ಇಷ್ಟಪಡುವ ಮಂದಿ, ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂಬ ಬ್ಯಾನರ್‍ಗಳನ್ನು ಹಿಡಿದು ಮೌನ ಮೆರವಣಿಗೆ ನಡೆಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin