ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಫೈರಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Sri-Lanka-firing--Indian-fi

ಕರೈಕಾಲ್(ಪುದುಚೇರಿ), ನ.17- ಶ್ರೀಲಂಕಾ ನೌಕಾಪಡೆ ಸಿಬ್ಬಂದಿ ನಡೆಸಿದ ಫೈರಿಂಗ್‍ನಲ್ಲಿ ಭಾರತದ ಇಬ್ಬರು ಮೀನುಗಾರರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡೈಕರೈ ಕರಾವಳಿಯಲ್ಲಿ ನಡೆದಿದೆ. ಪುದುಚೇರಿಗೆ 80 ಕಿ.ಮೀ. ದೂರದಲ್ಲಿರುವ ಸಮುದ್ರ ಪ್ರದೇಶದಲ್ಲಿ ನಿನ್ನೆ ಸಂಜೆ 100ಕ್ಕೂ ಹೆಚ್ಚು ದೋಣಿಗಳಲ್ಲಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಬೆಸ್ತರ ಮೇಲೆ ಗುಂಡು ಹಾರಿಸಿದರು. ಈ ಫೈರಿಂಗ್‍ನಲ್ಲಿ ಪುದುಚೇರಿಯ ಕರೈಕಲ್ ಜಿಲ್ಲೆಯ ಇಬ್ಬರು ಮೀನುಗಾರರು ತೀವ್ರ ಗಾಯಗೊಂಡಿದ್ದಾರೆ ಎಂದು ನಾಗಪಟ್ಟಣಂ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಅಮಲ್ ಕ್ಸೇವಿಯರ್ ತಿಳಿಸಿದ್ದಾರೆ. ಗುಂಡೇಟಿನಿಂದ ತೀವ್ರ ಗಾಯಗೊಂಡಿರುವ ಬಾಲ ಮುರುಗನ್ (22) ಮತ್ತು ಅರವಿಂದನ್ (21) ಪುದುಚೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ದ್ವೀಪರಾಷ್ಟ್ರದ ಕರಾವಳಿ ರಕ್ಷಣಾ ಪಡೆ ಇತ್ತೀಚೆಗೆ ರಾಮೇಶ್ವರಂ ಬಳಿ ದಾಳಿ ನಡೆಸಿ ಒಂದು ಮೀನುಗಾರಿಕೆ ದೋಣಿಯನ್ನು ಮುಳುಗಿಸಿ ನೂರಕ್ಕೂ ಹೆಚ್ಚು ಬಲೆಗಳನ್ನು ನಾಶಪಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

 

► Follow us on –  Facebook / Twitter  / Google+

Facebook Comments

Sri Raghav

Admin