ಭಾರತೀಯ ಮೂಲದ ವೈದ್ಯನಿಗೆ ರಾಷ್ಟ್ರೀಯ ಮಾನವೀಯತೆ ಪುರಸ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Abraham

ವಾಷಿಂಗ್ಟನ್, ಸೆ.15-ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯ ಸೇವೆ ಸಲ್ಲಿಸುತ್ತಿರುವ ಭಾರತೀಯ ಮೂಲಕ ಅಮೆರಿಕ ವೈದ್ಯ-ಲೇಖಕ ಅಬ್ರಾಹಾಂ ವರ್ಗಿಸ್ ಅವರನ್ನು ಪ್ರತಿಷ್ಠಿತ 2015ರ ನ್ಯಾಷನಲ್ ಹ್ಯುಮಾನಿಟೀಸ್ ಮೆಡೆಲ್ (ರಾಷ್ಟ್ರೀಯ ಮಾನವೀಯತೆ ಪದಕ) ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸೆ.21ರಂದು ನಡೆಯುವ ಸಮಾರಂಭದಲ್ಲಿ ಇತರ 11 ಮಂದಿಯೊಂದಿಗೆ ವರ್ಗಿಸ್ ಅವರಿಗೆ ಈ ಪದಕ ಪ್ರದಾನ ಮಾಡಲಿದ್ದಾರೆ.  ಪ್ರಸ್ತುತ ಸ್ಟಾನ್‍ಪೋರ್ಡ್ ಸ್ಕೂಲ್ ಆಫ್ ಮೆಡಿಸಿನ್‍ನಲ್ಲಿ ಔಷಧ ವಿಭಾಗದ ಪ್ರೊಫೆಸರ್ ಆಗಿರುವ 61 ವರ್ಷದ ವರ್ಗಿಸ್, ಮೈ ಓನ್ ಕಂಟ್ರಿ ಮತ್ತು ಕಟ್ಟಿಂಗ್ ಫಾರ್ ಸ್ಟೋನ್ ಸೇರಿದಂತೆ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin