ಭಾರತೀಯ ರಾಯಭಾರಿಗೆ ಅವಮಾನ : ಪಾಕಿಸ್ತಾನ ಹೈ ಕಮಿಷನರ್‍ಗೆ ಸಮನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Baseed

ನವದೆಹಲಿ, ಸೆ.8-ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಗೆ ಅಗೌರವ ತೋರಿರುವ ಪ್ರಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನರ್‍ಗೆ ಸಮನ್ಸ್ ನೀಡಿದೆ.  ಪಾಕ್ ಹೈಕಮಿಷನರ್ ಅಬ್ದುಲ್ ಬಸಿತ್ ಅವರನ್ನು ವಿದೇಶಾಂಗ ಇಲಾಖೆಗೆ ಬರುವಂತೆ ಸಮನ್ಸ್ ನೀಡಲಾಗಿತ್ತು. ಭಾರತದ ವಿದೇಶಾಂಗ ಇಲಾಖೆಯ ಪಶ್ಚಿಮ ಕಾರ್ಯದರ್ಶಿ ಸುಜಾತಾ ಮೆಹ್ತಾ, ಅಬ್ದುಲ್ ಬಸಿತ್ ಅವರೊಂದಿಗೆ ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರಿಗೆ ಅಗೌರವ ತೋರಿರುವ ಪ್ರಕರಣವನ್ನು ಚರ್ಚಿಸಿದ್ದು ಘಟನೆ ಬಗ್ಗೆ ಪ್ರತಿಭಟಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin