ಭಾರತೀಯ ರೈಲ್ವೆಯ ಹುಬ್ಬಳ್ಳಿ ವಿಭಾಗದಲ್ಲಿ ಗ್ರೂಪ್ (ಸಿ) ಹುದ್ದೆಗಳ ನೇರ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

hubballi-railway

ಭಾರತೀಯ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಲ್ಲಿ ಕ್ರೀಡಾ ಮಿಸಲಾತಿಯಡಿ ಗ್ರೂಪ್ (ಸಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 21
ಹುದ್ದೆಗಳ ವಿವರ
1.ಅಥ್ಲೆಟಿಕ್ – 09
2.ಬಾಸ್ಕೆಟ್ ಬಾಲ್ (ಮಹಿಳೆ) – 03
3.ಷಟಲ್ ಬಾಡ್ಮಿಂಟನ್ – 02
4.ಸೈಕ್ಲಿಂಗ್ – 02
5.ವಾಲಿಬಾಲ್ – 02
6.ವಾಟರ್ ಪೋಲೋ – 03
ವಿದ್ಯಾರ್ಹತೆ : ಪಿಯುಸಿ / 12ನೇ ತರಗತಿ / +2 ಅಥವಾ ಇದಕ್ಕೆ ಸರಿಸಮನಾದ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ : ಕನಿಷ್ಠ 18, ಗರಿಷ್ಠ 25 ವರ್ಷದೊಳಗಿರುವವರು ಅರ್ಜಿ ಸಲ್ಲಿಸಬಹುದು. ವಯೋಮಿಯಲ್ಲಿ ಯಾವುದೇ ರಿತೀಯ ಮಿಸಲಾತಿ ಸಡಿಲತೆ ಇರುವುದಿಲ್ಲ.
ಪರೀಕ್ಷಾ ಶುಲ್ಕ : ಪ.ಜಾ, ಪ.ಪಂ, ಎಕ್ಸ್ ಸರ್ವೀಸ್ ಮ್ಯಾನ್, ಪಿಡಬ್ಲೂಡಿ ವ್ಯಕ್ತಿಗಳಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 250 ರೂ, ಇತರ ವರ್ಗದವರಿಗೆ 500 ರೂ ಶುಲ್ಕ ನಿಗದಿಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ದಿ ಅಸಿಸ್ಟೆಂಟ್ ಪರ್ಸನಲ್ ಆಫೀಸರ್/ಹೆಡ್ ಕ್ಯಾಟ್ರಸ್ ರಿಕ್ಕ್ಯ್ರೂಟ್ ಸೆಲ್, 2ನೇ ಮಹಡಿ, ಓಲ್ಡ್ ಜಿ.ಎಂ ಕಚೇರಿ ಕಟ್ಟಡ, ಕ್ಲಬ್ ರಸ್ತೆ, ಹುಬ್ಬಳ್ಳಿ – 580023 ಇಲ್ಲಿಗೆ ಭರ್ತಿ ಮಾಡಿದ ಅರ್ಜಿಯನ್ನು ಕಳುಹಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-02-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ www.rrchubli.in ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin