ಭಾರತೀಯ ವಾಯು ಗಡಿ ಉಲ್ಲಂಘಿಸಿದ ಪಾಕ್ ವಿಮಾನ

ಈ ಸುದ್ದಿಯನ್ನು ಶೇರ್ ಮಾಡಿ

pAKISTAN

ನವದೆಹಲಿ, ಆ.30-ಭಾರತದ ಮೇಲೆ ದಾಳಿ ನಡೆಸಲು ಸಮಯ ಸಾಧಿಸುತ್ತಿರುವ ಪಾಕಿಸ್ತಾನದ ಮತ್ತೊಂದು ಕುಕೃತ್ಯ ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಆರ್ಎಸ್ ಪುರ ವಲಯದಲ್ಲಿ ಪಾಕಿಸ್ತಾನ್ ವಿಮಾನವೊಂದು ಭಾರತೀಯ ವಾಯು ಪ್ರದೇಶ ಉಲ್ಲಂಘನೆ ಮಾಡಿರುವ ಸಂಗತಿ ವರದಿಯಾಗಿದ್ದು, ಸಂಭವನೀಯ ಗಂಡಾಂತರದ ಬಗ್ಗೆ ಭದ್ರತಾ ಸಂಸ್ಥೆಗಳು ಎಚ್ಚರಿಕೆ ಗಂಟೆ ಬಾರಿಸಿವೆ.  ಪಾಕಿಸ್ತಾನದ ವಿಮಾನವೊಂದು ಭಾರತೀಯ ವಾಯು ಪ್ರದೇಶದ ಮೇಲೆ ಹಾರಿ ಹೋಗಿದ್ದನ್ನು ಓರ್ವ ಬಿಎಸ್ಎಫ್ ಯೋಧನೊಬ್ಬ ಗಮನಿಸಿದ. ಕಾಶ್ಮೀರ ಕಣಿವೆಯ ಆರ್ಎಸ್ ಪುರ ವಲಯದಲ್ಲಿ ಪಾಕ್ ವಿಮಾನ ಕಾಣಿಸಿಕೊಂಡ ಸಂಗತಿಯನ್ನು ಆತ ತನ್ನ ಮೇಲಧಿಕಾರಿಗಳಿಗೆ ತಿಳಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.

ಭಾರತೀಯ ವಾಯು ಪ್ರದೇಶದಲ್ಲಿ ಪಾಕ್ ವಿಮಾನ ಏಕೆ ಹಾರಿ ಹೋಯಿತು ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.  ಬೆಳ್ಳಿ ಬಣ್ಣದ ಆರು ರೆಕ್ಕೆಗಳ ಪುಟ್ಟ ವಿಮಾನ ನಮ್ಮ ವಾಯು ಪ್ರದೇಶದೊಳಗೆ ನುಸುಳಿ, ಒಂದು ನಿಮಿಷದ ನಂತರ ಹಿಂದಿರುಗಿತು. ಇದು ಖಂಡಿತಾ ನಮ್ಮ ಭಾರತೀಯ ವಾಯುಪಡೆ ವಿಮಾನ ಅಲ್ಲ ಎಂದು ಆತ ಹೇಳಿರುವುದಾಗಿ ವರದಿಯಾಗಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin