ಭಾರತೀಯ ಸಿನಿಮಾರಂಗಕ್ಕೂ ಆಸ್ಕರ್‍ನಂಥ ಪ್ರಶಸ್ತಿ ಬೇಕು : ಶಾರುಖ್

ಈ ಸುದ್ದಿಯನ್ನು ಶೇರ್ ಮಾಡಿ

14

ಆಸ್ಕರ್ ಪ್ರಶಸ್ತಿಗಳು ಸ್ಫೂರ್ತಿದಾಯಕವೇ ಹೊರತು ಅದೊಂದು ಮಾನದಂಡವಲ್ಲ-ಇದು ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ನೀಡಿರುವ ಸಮೀಕರಣ. ಪ್ರತಿಷ್ಠಿತ ಆಸ್ಕರ್‍ನಂಥ ಸ್ವತ್ತುಗಳು ಪ್ರೇರಣೆಯಾಗುತ್ತವೆ. ಭಾರತೀಯ ಚಿತ್ರರಂಗಕ್ಕೂ ಆಸ್ಕರ್ ಮಾದರಿಯ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡುವ ಅಗತ್ಯವಿದೆ ಎಂದು ಎಸ್‍ಆರ್‍ಕೆ ಹೇಳುತ್ತಾನೆ. ಸಿನಿಮಾರಂಗಕ್ಕಾಗಿ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳಿವೆ. ಗೋಲ್ಡನ್,ಭಾಫ್ಟಾನಂಥ ಪ್ರತಿಷ್ಠಿತ ಪ್ರಶಸ್ತಿಗಳಿದ್ದರೂ ಇವುಗಳಲ್ಲಿ ಆಸ್ಕರ್ ಅತ್ಯಂತ ಜನಪ್ರಿಯ ಎಂದು ಕಿಂಗ್‍ಖಾನ್ ಹೇಳಿದ್ದಾನೆ.

ಭಾರತೀಯ ಜನಪ್ರಿಯ ಸಿನಿಮಾಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತಷ್ಟು ಪ್ರದರ್ಶನಗೊಳ್ಳಬೇಕು. ವಿಶ್ವವು ಭಾರತದ ಸಿನಿಮಾರಂಗದ ಸಾಧನೆಯನ್ನು ಗುರುತಿಸುವಂತಾಗಬೇಕು ಎಂದು ಚೆಕ್ ದೆ ಇಂಡಿಯಾದ ನಟ ವಿಶ್ಲೇಷಿಸುತ್ತಾನೆ ಪ್ರೇಕ್ಷಕ ಪ್ರಭು ಕುರಿತು ಮಾತನಾಡಿರುವ ಎಸ್‍ಆರ್‍ಕೆ, ಪ್ರತಿಯೊಬ್ಬ ನಟ-ನಟಿಯರೂ ಪೇಕ್ಷಕರನ್ನು ಗೌರವಿಸಬೇಕು. ಪ್ರೇಕ್ಷಕರು ಒಂದು ರೀತಿಯಲ್ಲಿ ಪ್ರಾತ:ಸ್ಮರಣೀಯರು. ಅವರನ್ನು ಗೌರವಿಸಬೇಕು. ನಮ್ಮ ಸಿನಿಮಾಗಳ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುತ್ತಾರೆ ಎಂಬ ಕಾರಣಕ್ಕಾಗಿ ಅವರನ್ನು ಉಪೇಕ್ಷೆ ಮಾಡಬಾರದು ಎಂದು ಶಾರುಖ್ ತಿಳಿಸಿದ್ದಾನೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin