ಭಾರತೀಯ ಸೇನಾ ಬತ್ತಳಿಕೆ ಸೇರಿದ ಮತ್ತೊಂದು ಅಸ್ತ್ರ : ಪೃಥ್ವಿ-2 ಕ್ಷಿಪಣಿ ಪರೀಕ್ಷೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Pritvi--01

ಬಾಲಸೋರ್(ಒಡಿಶಾ), ಜೂ.2– ದೇಶೀಯವಾಗಿ ಅಭಿವೃದ್ಧಿಗೊಳಿಸಿದ ಅಣ್ವಸ್ತ್ರ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಇಂದು ಯಶಸ್ವಿಯಾಗಿ ನಡೆಯಿತು. ಇದರೊಂದಿಗೆ ಭಾರತದ ಶಸ್ತ್ರಾಸ್ತ್ರಗಳ ಬತ್ತಳಿಕೆಗೆ ಹೊಸ ಅಸ್ತ್ರವೊಂದು ಸೇರ್ಪಡೆಯಾದಂತಾಗಿದೆ.   ಸೇನೆಯ ಪ್ರಾಯೋಗಿಕ ಬಳಕೆಯ ಭಾಗವಾಗಿ ಪೃಥ್ವಿ-2 ಕ್ಷಿಪಣಿಯನ್ನು ಯಶಸ್ವಿಯಾಗಿ ನಿಖರ ಗುರಿಯತ್ತ ಚಿಮ್ಮಿಸಲಾಯಿತು ಬಾಲಸೋರ್‍ನ ಚಂಡಿಪುರದ ಸಮಗ್ರ ಪರೀಕ್ಷಾ ವಲಯದ(ಐಟಿಆರ್) ಉಡಾವಣೆ ಸಂಕೀರ್ಣ-3ರಿಂದ ಸಂಚಾರಿ ಉಡ್ಡಯನ ವಾಹಕದ ಮೂಲಕ ಬೆಳಗ್ಗೆ 9.50ರಲ್ಲಿ ನಡೆಸಲಾದ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.350 ಕಿ.ಮೀ. ದೂರದ ಗುರಿಯನ್ನು ನಿಖರವಾಗಿ ತಲುಪಬಲ್ಲ ಸಾಮಥ್ರ್ಯ ಭೂಮಿಯಿಂದ ಭೂಮಿಗೆ ಚಿಮ್ಮುವ ಈ ಕ್ಷಿಪಣಿಗಿದೆ. ಇದು 500 ರಿಂದ 1,000 ಕೆಜಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದ್ದು, ಇದು ವೈರಿಗಳ ನೆಲೆಗಳನ್ನು ಅಥವಾ ಫಿರಂಗಿಗಳನ್ನು ಕರಾರುವಕ್ಕಾಗಿ ಧ್ವಂಸಗೊಳಿಸಬಲ್ಲದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin