ಭಾರತ-ಅಮೆರಿಕ ಬಾಂಧವ್ಯ ಮತ್ತಷ್ಟು ಪಕ್ವ : ಅರುಣ್ ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun

ವಾಷಿಂಗ್ಟನ್, ಏ.22-ಭಾರತ ಮತ್ತು ಅಮೆರಿಕ ಬಾಂಧವ್ಯ ಕಳೆದ ಕೆಲವು ದಶಕಗಳಿಂದ ಗಮನಾರ್ಹವಾಗಿ ಸುಧಾರಣೆ ಯಾಗಿದ್ದು, ಈಗ ಹೆಚ್ಚು ಸದೃಢ ಮತ್ತು ಪ್ರೌಢತೆ ಹೊಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಜೇಟ್ಲಿ ಅವರ ಗೌರವಾರ್ಥ ಭಾರತೀಯ ರಾಯಭಾರಿ ನವ್‍ತೇಜ್ ಸರ್ನಾ ವಾಷಿಂಗ್ಟನ್‍ನಲ್ಲಿ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ವಿತ್ತ ಸಚಿವರು, ದ್ವಿಪಕ್ಷೀಯ ಸಂಬಂಧಗಳ ವಿವಿಧ ಆಯಾಮಗಳಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದೊಂದಿಗೆ ಕಾರ್ಯನಿರ್ವಹಿಸಲು ಭಾರತ ಸರ್ಕಾರ ಉತ್ಸುಕವಾಗಿದೆ ಎಂದರು. ಎರಡೂ ದೇಶಗಳ ಉಭಯಪಕ್ಷೀಯ ಸಂಬಂಧದ ಸಹಕಾರ ಹಿಂದೆಂದಿಗಿಂತಲೂ ಪ್ರಬಲವಾಗಿದೆ. ಅಮೆರಿಕ-ಭಾರತ ಸರ್ಕಾರಗಳಲ್ಲಿ ಮಹತ್ವದ ಪರಿವರ್ತನೆಗೆ ಇದು ಸಹಕಾರಿಯಾಗಲಿದೆ ಎಂದು ಜೇಟ್ಲಿ ಹೇಳಿದರು.ಭಾರತೀಯ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ದೇಶದಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಪ್ರಮುಖ ಪೊಗತಿಕ ರಕ್ಷಣಾ ಕಂಪನಿಗಳಿಗೆ ನೆರವು ನೀಡಲು ಭಾರತ ನೀತಿಯೊಂದನ್ನು ರೂಪಿಸುತ್ತಿದೆ ಎಂದು ಅವರು ತಿಳಿಸಿದರು. ಅಮೆರಿಕದಲ್ಲಿರುವ ಉದ್ಯೋಗಸ್ಥ ಭಾರತೀಯರ ನೌಕರಿಗೆ ಆತಂಕ ತಂದೊಡ್ಡಿರುವ ಎಚ್-1ಬಿ ವೀಸಾ ವಿಷಯದ ಬಗ್ಗೆ ವಾಣಿಜ್ಯ ಸಚಿವ ವಿಲ್‍ಬರ್ ರೋಸ್ ಅವರೊಂದಿಗೆ ವಿತ್ತ ಸಚಿವರು ನಿನ್ನೆ ಸಮಾಲೋಚನೆ ನಡೆಸಿದ್ದರು. ಅಮೆರಿಕ ಅಭಿವೃಧ್ದಿಗಾಗಿ ಉನ್ನತ ಕೌಶಲ್ಯದ ಭಾರತೀಯ ವೃತ್ತಿಪರರು ವಹಿಸಿರುವ ಬಹು ಮುಖ್ಯ ಪಾತ್ರವನ್ನು ಜೇಟ್ಲಿ ಪ್ರಮುಖವಾಗಿ ಪ್ರಸ್ತಾಪಿಸಿ, ಉಭಯತಾಪಿ ಅನುಕೂಲಕ್ಕಾಗಿ ಕೆಲವು ನೀತಿಗಳನ್ನು ಪುನರ್ ಪರಾಮರ್ಶಿಸುವಂತೆ ಮನವಿ ಮಾಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin