ಭಾರತ, ಆಫ್ಭನ್ ಮೇಲೆ ದಾಳಿಗೆ ಪಾಕ್ ಉಗ್ರರು ಸಜ್ಜು : ಸ್ಪೈಮಾಸ್ಟರ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Terrorist--01

ವಾಷಿಂಗ್ಟನ್, ಮೇ 12-ಭಾರತ ಮತ್ತು ಆಫ್ಘಾನಿಸ್ತಾನಗಳ ಮೇಲೆ ಭಾರೀ ದಾಳಿ ನಡೆಸಲು ಪಾಕಿಸ್ತಾನ ಮೂಲಕ ಭಯೋತ್ಪಾದಕ ಗುಂಪುಗಳು ಸಂಚು ರೂಪಿಸುತ್ತಿವೆ ಎಂದು ಅಮೆರಿಕದ ಉನ್ನತ ಬೇಹುಗಾರಿಕೆ ಪರಿಣಿತರೊಬ್ಬರು ಎಚ್ಚರಿಕೆ ನೀಡಿದ್ದಾರೆ.   ಪಾಕಿಸ್ತಾನದಲ್ಲಿ ಉಗ್ರಗಾಮಿಗಳು ಮತ್ತು ಭಯೋತ್ಪಾದಕರನ್ನು ಮಟ್ಟ ಹಾಕಲು ಪಾಕ್ ಸರ್ಕಾರ ವಿಫಲವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಡೇನಿಯಲ್ ಕೋಟ್ಸ್ ತಿಳಿಸಿದ್ದಾರೆ.ವಿಶ್ವವ್ಯಾಪಿ ಭಯೋತ್ಪಾದಕರ ಆತಂಕಗಳ ಕುರಿತ ಸಂವಾದದ ವೇಳೆ ಗುಪ್ರಚರ ವಿಷಯದ ಸೆನೆಟ್ ಆಯ್ಕೆ ಸಮಿತಿ ಸದಸ್ಯರಿಗೆ ಈ ವಿಷಯ ತಿಳಿಸಿದ ಡೇನಿಯಲ್, ಭಾರತ ಮತ್ತು ಆಫ್ಘಾನಿಸ್ತಾನ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದನೆ ಸಂಘಟನೆಗಳು ಅಮೆರಿಕದ ಹಿತಾಸಕ್ತಿಗೆ ಆತಂತವೊಡ್ಡಿದೆ ಹಾಗೂ ಭಾರತ ಮತ್ತು ಆಫ್ಘನ್ ಮೇಲೆ ಭಯಾನಕ ದಾಳಿಗಳನ್ನು ನಡೆಸಲು ಸಜ್ಜಾಗಿದೆ ಎಂದು ಅವರು ಎಚ್ಚರಿಕೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin