ಭಾರತ ಹೋರಾಟ, ಕೋತೂಹಲ ಘಟ್ಟದಲ್ಲಿ 2ನೇ ಟೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Rahane
ಬೆಂಗಳೂರು, ಮಾ.6- ಬ್ಯಾಟಿಂಗ್ ವೈಫಲ್ಯದಿಂದ ಕಂಗೆಟ್ಟಿದ್ದ ಕೊಹ್ಲಿ ಪಡೆ ಇಂದು ಮೈ ಕೊಡವಿ ಎದ್ದು ನಿಂತಂತೆ ಕಂಡು ಬಂದಿದೆ. ಮೂರನೆ ದಿನದಾಟದ ಆರಂಭದಲ್ಲೇ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ಇಂದು ಆಸ್ಟ್ರೇಲಿಯಾ 213 ರನ್‍ಗಳಿಗೆ ತನ್ನ ಪ್ರಥಮ ಇನ್ನಿಂಗ್ಸ್‍ನ್ನು ಅಂತ್ಯಗೊಳಿಸಿ 87 ರನ್‍ಗಳ ಮುನ್ನಡೆ ದಾಖಲಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ದಿನದಾಟದಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡು 213 ರನ್ ಮಾಡಿದೆ.  ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಮುಕುಂದ್ ಮತ್ತು ಕೆ.ಎಲ್.ರಾಹುಲ್ ಜೋಡಿ ಉತ್ತಮವಾಗಿ ಬ್ಯಾಟ್ ಬೀಸಿದರು. ಭೋಜನ ವಿರಾಮದವರೆಗೂ ಯಾವುದೇ ಒತ್ತಡಕ್ಕೆ ಸಿಲುಕದೆ ಎಚ್ಚರಿಕೆಯಿಂದ ಆಸಿಸ್ ವೇಗದ ಬೌಲರ್‍ಗಳನ್ನು ದಿಟ್ಟವಾಗಿ ಎದುರಿಸಿದರು.

ನಂತರ ಈ ಜೋಡಿಯನ್ನು ಮುರಿಯುವಲ್ಲಿ ಆಸಿಸ್ ವೇಗಿ ಹೇಜಲ್‍ವುಡ್ ಯಶಸ್ವಿಯಾದರು. ನಂತರ ಬಂದ ಚೇತೇಶ್ವರ ಪೂಜಾರ ತಾಳ್ಮೆಯ ಆಟಕ್ಕೆ ಮುಂದಾದರೆ ಕೆ.ಎಲ್.ರಾಹುಲ್ ಕೆಲ ಆಕರ್ಷಕ ಹೊಡೆತಗಳ ಮೂಲಕ ರನ್ ವೇಗವನ್ನು ಹೆಚ್ಚಿಸಿದರು.  ಡ್ರಿಂಕ್ಸ್ ವಿರಾಮದ ವೇಳೆಗೆ ರಾಹುಲ್ ಅರ್ಧ ಶತಕ ಸಿಡಿಸಿ ಭಾರತದ ಪಾಳಯದಲ್ಲಿ ಹೋರಾಟದ ಹೊಸ ಭರವಸೆ ಮೂಡಿಸಿದರು.   ಪ್ರಸ್ತುತ ಹಿನ್ನಡೆಯನ್ನು (87 ರನ್‍ಗಳ) ಪೂರೈಸಿ ಆಸಿಸ್‍ಗೆ ಕಠಿಣ ಸವಾಲನ್ನು ಒಡ್ಡಲು ಇಬ್ಬರು ಆಟಗಾರರು ಸಜ್ಜಾಗಿರುವಂತೆ ಕಂಡು ಬಂತು.
ಆದರೆ ಉತ್ತಮ ಲಯದಲ್ಲಿ ಕಂಡು ಬಂದಿದ್ದ ಕೆ.ಎಲ್.ರಾಹುಲ್ (51) ಆಸಿಸ್‍ನ ಸ್ಪಿನ್ನರ್ ಸ್ಟೀವ್ ಓ ಕೆಫೆ ಅವರ ಬೌಲಿಂಗ್‍ನಲ್ಲಿ ಔಟಾದಾಗ ಭಾರತ ತನ್ನ ಎರಡನೆ ವಿಕೆಟ್ ಕಳೆದುಕೊಂಡಿತು.
ಇನ್ನು ಎರಡು ದಿನ ಆಟ ಉಳಿದಿರುವುದರಿಂದ ಪಂದ್ಯದ ಫಲಿತಾಂಶ ನಿರೀಕ್ಷಿಸಲಾಗಿದ್ದು, ಇಂದು ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ಕಾಯ್ದುಕೊಂಡು ಹೆಚ್ಚಿನ ಕಲೆ ಹಾಕಿದರೆ ಆಸ್ಟ್ರೇಲಿಯಾವನ್ನು ಒತ್ತಡಕ್ಕೆ ಸಿಲುಕಿಸಬಹುದಾಗಿದೆ.

ನಂತರ ಬಂದ ವಿರಾಟ್ ಕೊಹ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಎದ್ದು ಕಂಡಿತು. ಎರಡಂಕಿ ದಾಟುವ ಮುಂಚೆಯೇ ನಿರ್ಗಮಿಸಿದ್ದು ಭಾರತದ ಪಾಳಯದಲ್ಲಿ ಆತಂಕ ಶುರುವಾಯಿತು. ಇದಾದ ಬಳಿಕ ಬಂದ ಜಡೇಜಾ ಕೂಡ ಹೆಚ್ಚು ಹೊತ್ತು ಕ್ರೀಜ್ ನಲ್ಲಿ ನಿಲ್ಲಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು. ಸೋಲಿನ ದವಡೆಗೆ ಭಾರತ ಸಿಕ್ಕಿತು ಎನ್ನುವಷ್ಟರಲ್ಲಿ ಆಪಾಧ್ಬಾಂದವರಂತೆ ಕಣಕ್ಕಿಳಿದಿದ್ದ ರಹಾನೆ ಮತ್ತು ಪೂಜಾರ ತಂಡವನ್ನು ಅಪಾಯದಿಂದ ಪಾರು ಮಾಡಿದರು. ದಿನದಾಟದಂತ್ಯಕ್ಕೆ ಪೂಜಾರ ಅರ್ಧ ಶತಕ ಸಿಡಿಸಿ 79 ರನ್ ರಹಾನೆ 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ನಾಳಿನ ಆತ ಕುತೂಹಲ ಕೆರಳಿಸಲಿದೆ.   ಒಟ್ಟಾರೆ ಭಾರತ 126 ರನ್ ಗಳ ಮುನ್ನಡೆ ಪಡೆದಿದ್ದು ಇನ್ನೂ 6 ವಿಕೆಟ್ ಗಳಿದ್ದು, ಪಂದ್ಯ ಕುತೂಹಲ ಘಟ್ಟ ತಲುಪುವುದು ಬಹುತೇಕ ನಿಶ್ಚಿತವಾಗಿದೆ.

Team-India--041

ನಂತರ ಬಂದ ವಿರಾಟ್ ಕೊಹ್ಲಿ ಮತ್ತೆ ಬ್ಯಾಟಿಂಗ್ ವೈಫಲ್ಯ ಎದ್ದು ಕಂಡಿತು. ಎರಡಂಕಿ ದಾಟುವ ಮುಂಚೆಯೇ ನಿರ್ಗಮಿಸಿದ್ದು ಭಾರತದ ಪಾಳಯದಲ್ಲಿ ಆತಂಕ ಶುರುವಾಯಿತು. ಇದಾದ ಬಳಿಕ ಬಂದ ಜಡೇಜಾ ಕೂಡ ಹೆಚ್ಚು ಹೊತ್ತು ಕ್ರೀಜ್ ನಲ್ಲಿ ನಿಲ್ಲಲು ಸಾಧ್ಯವಾಗದೆ ವಿಕೆಟ್ ಒಪ್ಪಿಸಿದರು. ಸೋಲಿನ ದವಡೆಗೆ ಭಾರತ ಸಿಕ್ಕಿತು ಎನ್ನುವಷ್ಟರಲ್ಲಿ ಆಪಾಧ್ಬಾಂದವರಂತೆ ಕಣಕ್ಕಿಳಿದಿದ್ದ ರಹಾನೆ ಮತ್ತು ಪೂಜಾರ ತಂಡವನ್ನು ಅಪಾಯದಿಂದ ಪಾರು ಮಾಡಿದರು. ದಿನದಾಟದಂತ್ಯಕ್ಕೆ ಪೂಜಾರ ಅರ್ಧ ಶತಕ ಸಿಡಿಸಿ 79 ರನ್ ರಹಾನೆ 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ನಾಳಿನ ಆತ ಕುತೂಹಲ ಕೆರಳಿಸಲಿದೆ.   ಒಟ್ಟಾರೆ ಭಾರತ 213 ರನ್ ಗಾಲ ಮುನ್ನಡೆ ಪಡೆದಿದ್ದು ಇನ್ನೂ 6 ವಿಕೆಟ್ ಗಳಿದ್ದು, ಪಂದ್ಯ ಕುತೂಹಲ ಘಟ್ಟ ತಲುಪುವುದು ಬಹುತೇಕ ನಿಶ್ಚಿತವಾಗಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin