ಭಾರತ-ಚೀನಾ ಜಂಟಿ ಕಾರ್ಯಾಚರಣೆ , ಕಡಲ್ಗಳ್ಳರು ಅಪಹರಿಸಿದ್ದ ನೌಕೆ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Indian

ನವದೆಹಲಿ, ಏ.9-ಅಡೇನ್ ಗಲ್ಫ್‍ನಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ ವಾಣಿಜ್ಯ ನೌಕೆಯೊಂದನ್ನು ಭಾರತ ಮತ್ತು ಚೀನಾ ನೌಕಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿವೆ.  ಭಾರತ-ಚೀನಾ ನಡುವೆ ಟಿಬೆಟ್ ಧರ್ಮಗುರು ದಲೈಲಾಮ ಸೇರಿದಂತೆ ವಿವಿಧ ವಿಷಯಗಳಲ್ಲಿ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲೇ ಈ ಉಭಯ ರಾಷ್ಟ್ರಗಳ ಜಂಟಿ ಸಾಹಸ ಕಾರ್ಯಾಚರಣೆ ಬಗ್ಗೆ ವಿಶ್ವದ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ನಿನ್ನೆ ರಾತ್ರಿ ವೈಎಸ್-35 ಎಂಬ ಮರ್ಚೆಂಟ್ ನೌಕೆ ಮೇಲೆ ಸಮುದ್ರ ಕಳ್ಳರು ಮುಗಿಬಿದ್ದು ಅದನ್ನು ವಶಕ್ಕೆ ತೆಗೆದುಕೊಂಡಿದ್ದರು. ಸಮೀಪದಲ್ಲೇ ಇದ್ದ ಭಾರತೀಯ ನೌಕಾ ಪಡೆಗೆ ಈ ವಿಷಯ ತಿಳಿದು ಎರಡು ಯುದ್ಧ ನೌಕೆಗಳನ್ನು ಸ್ಥಳಕ್ಕೆ ರವಾನಿಸಿ ಅಪಹೃತ ಹಡಗನ್ನು ರಕ್ಷಿಸಿದವು.

ಇದೇ ಸಂದರ್ಭದಲ್ಲಿ ಅದೇ ಸಾಗರ ಪ್ರದೇಶದಲ್ಲಿದ್ದ ಚೀನಾ ನೌಕೆಗಳು ಸಹ ಭಾರತೀಯ ನೌಕಾಪಡೆಗೆ ಸಹಕಾರ ನೀಡಿ ಜಂಟಿ ಕಾರ್ಯಾಚರಣೆ ಮೂಲಕ ಕಡಲ್ಗಳ್ಳರನ್ನು ಬಡಿದೋಡಿಸಿದವು.  ಭಾರತದ ಈ ಕಾರ್ಯಾಚರಣೆ ಬಗ್ಗೆ ಚೀನಾ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದೆ. ಈ ವಿಷಯದಲ್ಲಿ ಭಾರತ ಮತ್ತು ಚೀನಾದ ಸದ್ಬಾವ ಸಂಬಂಧದ ಬಗ್ಗೆ ವಿಶ್ವದ ಅನೇಕ ರಾಷ್ಟ್ರಗಳು ತಲೆದೂಗಿವೆ.

Facebook Comments

Sri Raghav

Admin