ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್’ನ ಸೇಡು ತೀರಿಸಿಕೊಳ್ಳಲು ಉಗ್ರರ ಹುನ್ನಾರ
ಶ್ರೀನಗರ,ಅ.12-ಉರಿ ದಾಳಿ ಪ್ರತೀಕಾರವಾಗಿ ಭಾರತೀಯ ಸೇನೆಯು ಸೀಮಿತ ದಾಳಿ ನಡೆಸಿ ಪ್ರತ್ಯುತ್ತರ ನೀಡಿದ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಲಷ್ಕರ್ -ಎ-ತೊಯ್ಬ ಉಗ್ರರು ದಾಳಿಗೆ ಸಂಚು ರೂಪಿಸಿದ್ದಾರೆ ಎಂದು ಎನ್ಐಎಗೆ ಮಾಹಿತಿ ಲಭ್ಯವಾಗಿದೆ. ಉಗ್ರರು ಯಾವ ಸಮಯದಲ್ಲಾದರೂ ಗಡಿಯೊಳಗೆ ನುಸುಳಿ ದಾಳಿ ನಡೆಸಬಹುದು ಎಂದು ಎನ್ಐಎ ಭಾರತೀಯ ಸೇನೆಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನಿಸಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಎಲ್ಒಸಿಯಲ್ಲಿ ನೂರಕ್ಕೂ ಹಾಗೂ 250 ಹೆಚ್ಚೂ ಭಯೋತ್ಪಾದಕರು ದೇಶದೊಳಗೆ ನುಸುಳಿರುವ ಶಂಕೆ ವ್ಯಕ್ತವಾಗಿದ್ದು, ಗಡಿಯಲ್ಲಿ ಭಾರತೀಯ ಯೋಧರು ಕಣಿವೆ ರಾಜ್ಯದಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ. ಯಾವುದೇ ಸಮಯದಲ್ಲಿ ದಾಳಿ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಉಗ್ರರನ್ನು ಹಿಮ್ಮೆಟ್ಟಲು ಸೇನಾ ಪಡೆ ಸಜ್ಜಾಗಿದೆ. ಭಾರತ-ಪಾಕ್ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ.
► Follow us on – Facebook / Twitter / Google+