ಭಾರತವನ್ನೇ ದೋಷಿಯನ್ನಾಗಿಸಿ ವರದಿ ಮಾಡುತ್ತಿವೆ ಪಾಕ್ ಮಾಧ್ಯಮಗಳು

ಈ ಸುದ್ದಿಯನ್ನು ಶೇರ್ ಮಾಡಿ

Pak-01

ನವದೆಹಲಿ, ಸೆ.20- ಜಮ್ಮು-ಕಾಶ್ಮೀರದ ಉರಿ ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 17 ಭಾರತೀಯ ಯೋಧರು ಹುತಾತ್ಮರಾಗಿದ್ದು, ಘಟನೆಗೆ ಪಾಕಿಸ್ತಾನ ಮೂಲದ ಜೈಸ್-ಇ-ಮೊಹಮದ್ ಉಗ್ರ ಸಂಘಟನೆ ಹೊಣೆ ಎಂದು ಹೇಳಲಾಗಿದೆ. ಉರಿ ಉಗ್ರರ ದಾಳಿ, ಪಠಾಣ್ ಕೋಟ್‍ನಂತೆ ಭಾರತದ ಮತ್ತೊಂದು ಕಾರ್ಯಾಚರಣೆಯಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ಭಾರತವನ್ನು ದೂಷಿಸಿವೆ. ಉರಿ ಉಗ್ರರ ದಾಳಿಯಲ್ಲಿ 18 ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ ಎಂಬುದು ಭಾರತದ ಮತ್ತೊಂದು ನಾಟಕ ಎಂದು ಪಾಕಿಸ್ತಾನ ಪತ್ರಿಕೆ ತನ್ನ ಅಂತಾರಾಷ್ಟ್ರೀಯ ಸುದ್ದಿ ಪುಟದಲ್ಲಿ ಪ್ರಕಟಿಸಿದೆ. ಭಾರತವೇ ತನ್ನ ಯೋಧರ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ವಿರುದ್ಧ ಆರೋಪ ನಡೆಸುತ್ತಿದೆ. ಇದು ಕಾಶ್ಮನೀರ ಸಮಸ್ಯೆಯಿಂದ ವಿಶ್ವದ ಗಮನವನ್ನು ಬೇರೆಡೆ ಚದುರಿಸಲು ಭಾರತ ಮಾಡುತ್ತಿರುವ ಡ್ರಾಮಾ ಎಂದು ಹೇಳಿದೆ.

ವಂಚಕ ಭಾರತೀಯ ಮಾಧ್ಯಮಗಳು ಪಾಕಿಸ್ತಾನ ಹೆಸರು ಕೆಡಿಸಲು ಮಾಡುತ್ತಿರುವ ಕುತಂತ್ರ ಎಂದು ಪತ್ರಿಕೆಯಲ್ಲಿ ಭಾರತೀಯ ಮಾಧ್ಯಮಗಳನ್ನು ನಿಂದಿಸಲಾಗಿದೆ.  ಸಿಖ್ ಸಮುದಾಯದ ಪ್ರಾಬಲ್ಯವಿರುವ ಸೇನಾ ನೆಲೆ ಭಾರತದ ಗುರಿಯಾಗಿತ್ತು. ಮುಸ್ಲಿಮರು ಮತ್ತು ಸಿಖ್‍ರನ್ನು ಭಾರತ ವಿಭಜಿಸುತ್ತಿದೆ. ಕಾಶ್ಮೀರದಲ್ಲಿ ಹೋರಾಟ ನಡೆಸುತ್ತಿರುವ ಮುಸ್ಲಿಮರಿಗೆ ಬೆಂಬಲ ನೀಡುವುದನ್ನು ಭಾರತ ನಿಲ್ಲಿಸಬೇಕು ಎಂದು ಡಾನ್ ಪತ್ರಿಕೆಯಲ್ಲಿ ಬರೆಯಲಾಗಿದೆ.ಭಾರತ ಮತ್ತು ಪಾಕಿಸ್ತಾನ ಸಂಬಂಧಗಳು ಅಪಾಯಕಾರಿ ಮಟ್ಟ ತಲುಪಿವೆ ಎಂದು ಹೇಳಿದೆ.

► Follow us on –  Facebook / Twitter  / Google+

Facebook Comments

Sri Raghav

Admin