ಭಾರತ ನೀಡಿರುವ ದಾವೂದ್ ನ 6 ವಿಳಾಸಗಳಲ್ಲಿ 3 ಸರಿಯಿಲ್ಲ : ವಿಶ್ವಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Dawood

ವಿಶ್ವಸಂಸ್ಥೆ, ಆ.23-ಪಾಕಿಸ್ತಾನದಲ್ಲಿ ಕುಪ್ರಸಿದ್ಧ ಅಂತರರಾಷ್ಟ್ರೀಯ ಭಯೋತ್ಪಾದಕ ಮತ್ತು ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಸ್ಥಳಗಳ ಬಗ್ಗೆ ಭಾರತ ನೀಡಿರುವ ಒಂಭತ್ತು ವಿಳಾಸಗಳಲ್ಲಿ ಮೂರು ಸರಿಯಾಗಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ಹೀಗಾಗಿ ತನ್ನ ಪಟ್ಟಿಯಿಂದ ಅದನ್ನು ತೆಗೆದುಹಾಕಲಾಗಿದೆ ಎಂದು ಯುಎನ್ ತಿಳಿಸಿದೆ.   ಭಾರತ ಒದಗಿಸಿರುವ ಇತರ ಆರು ವಿಳಾಸಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ಕೈದಾ ದಿಗ್ಬಂಧನಗಳ ಸಮಿತಿ ತಿಳಿಸಿದೆ. ಭಾರತದ ನೀಡಿರುವ ಸ್ಥಳಗಳಲ್ಲಿ ಒಂದು ಜಗವು ವಿಶ್ವಸಂಸ್ಥೆಗೆ ಇಸ್ಲಾಮಾಬಾದ್ ರಾಜತಾಂತ್ರಿಕರಾಗಿರುವ ಮಲೇಹಾ ಲೋಧಿ ಅವರ ವಿಳಾಸವನ್ನು ಹೋಲುತ್ತದೆ. ಭಾರತ ನೀಡಿರುವ ಈ ವಿಳಾಸ ಸರಿಯಿಲ್ಲ ಎಂದು ಸಮಿತಿ ತಿಳಿಸಿದೆ.
ಭಾರತ ನೀಡಿರುವ ಇನ್ನೆರೆಡು ವಿಳಾಸಗಳಾದ ಮೇನ್ ಪ್ರಾಪರ್ಟಿ ಅಟ್ ಮಾರ್ಗಲ್ಲಾ ರೋಡ್, ಎಫ್-6/2, ಸ್ಟ್ರೀಟ್ ನಂ.22 ಹಾಗೂ ಹೌಸ್ ನಂ.07, ಇಸ್ಲಾಮಾಬಾದ್ ನಂಬರ್ 29, ಕರಾಚಿ ಇದು ಕೂಡ ತಪ್ಪಿನಿಂದ ಕೂಡಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ದೇಶದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, 1993ರ ಮುಂಬೈ ಸರಣಿ ಸ್ಫೋಟದ ಹಿಂದಿರುವ ಪ್ರಮುಖ ಆರೋಪಿ ಈಗ ಪಾಕಿಸ್ತಾನದ ರಕ್ಷಣೆಯಲ್ಲಿದ್ದಾನೆ. ಒಂದು ವರ್ಷದ ಹಿಂದೆ ಭಾರತೀಯ ಕಮಾಂಡೋಗಳ ಒಂದು ತಂಡ ದಾವೂದ್ ಶಿಕಾರಿಗಾಗಿ ಗುಪ್ತವಾಗಿ ಪಾಕಿಸ್ತಾನಕ್ಕೆ ಹೋಗಿತ್ತು. ತಮ್ಮ ರಹಸ್ಯ ಕಾರ್ಯಾದಚರಣೆಯಲ್ಲಿ ಬಹುತೇಕ ಯಶಸ್ವಿಯಾಗಿದ್ದ ಈ ತಂಡವು ಇನ್ನೇನು ಆತನನ್ನು ಬೇಟೆಯಾಡಿ ಮುಗಿಸಬೇಕು ಎನ್ನುವಷ್ಟರಲ್ಲಿ ಬಂದ ಫೋನ್ ಕರೆಯೊಂದು ಕಮ್ಯಾಂಡೋಗಳ ಹಂಟಿಂಗ್ ಆಪರೇಷನ್ಗೆ ಅಡ್ಡಿಯಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin