ಭಾರತ-ಪಾಕ್ ಗಡಿಯಲ್ಲಿ 22 ಕೆಜಿ ಡ್ರಗ್ಸ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Druggs--0002

ಅಮೃತಸರ್, ನ.18-ಪಂಪೊಬ್‍ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಗುಂಡಿನ ಚಕಮಕಿ ನಂತರ ಅಂತರ್‍ಗಡಿ ಕಳ್ಳಸಾಗಣೆ ಪೊಲವನ್ನು ಭೇದಿಸಿರುವ ಬಿಎಸ್‍ಎಫ್ ಯೋಧರು 22 ಕೆಜಿ ಮಾದಕ ವಸ್ತು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ತಲಾ ಒಂದು ಕೆಜಿ ಹೆರಾಯಿನ್ ಇರುವ 22 ಪೊಟ್ಟಣಗಳು, ಟರ್ಕಿಯ ಪಿಸ್ತೂಲ್‍ಗಳು, 11 ಬುಲೆಟ್‍ಗಳು ಮತ್ತು ಪ್ಲಾಸ್ಟಿಕ್ ಪೈಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫಿರೋಜ್‍ಪುರ್ ಸೆಕ್ಟರ್‍ನ ಸತ್ಪಾಲ್ ಪೋಸ್ಟ್ ಬಳಿ ಗಡಿ ಬೇಲಿ ಮೂಲಕ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಿಎಸ್‍ಎಫ್ ಮತ್ತು ಪಂಪೊಬ್ ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದರು. ಮುಂಪೊನೆ 4 ಗಂಟೆ ಸಮಯದಲ್ಲಿ ಗಡಿಯಾಚೆಯಿಂದ ಇವುಗಳನ್ನು ಭಾರತದ ಗಡಿಯೊಳಗೆ ತರುತ್ತಿದ್ದ ಸಂದರ್ಭದಲ್ಲಿ ಯೋಧರು ಮತ್ತು ಕಳ್ಳಸಾಗಣೆದಾರರ ನಡುವೆ ಗುಂಡಿನ ಚಕಮಕಿ ನಡೆಯಿತು. ಡ್ರಗ್ಸ್ ಸ್ಮಗ್ಲರ್‍ಗಳು ಮಾಲುಗಳನ್ನು ಬಿಟ್ಟು ಪರಾರಿಯಾದರು. ಅವರ ರಕ್ತದ ಕಲೆಗಳು ಬೇಲಿಯಲ್ಲಿ ಕಂಡುಬಂದಿವೆ. ಕಳ್ಳ ಸಾಗಣೆದಾರರಿಗಾಗಿ ಶೋಧ ಮುಂದುವರಿದಿದೆ.

Facebook Comments

Sri Raghav

Admin