ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹಕ್ಕೆ ಧಕ್ಕೆಯುಂಟಾಗಿದೆ : ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

virat

ನವದೆಹಲಿ, ಮಾ.30- ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸ್ನೇಹಕ್ಕೆ ಧಕ್ಕೆಯುಂಟಾಗಿದೆ ಎಂಬುದನ್ನು ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ವಿರಾಟ್ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಸರಣಿ ಗೆಲುವಿನ ನಂತರ ಈ ಕುರಿತು ಟ್ವಿಟ್ ಮಾಡಿರುವ ಕೊಹ್ಲಿ ಆ ದೇಶದ ಆಟಗಾರರ ನಡುವೆ ಈ ಹಿಂದೆ ಹೊಂದಿದ್ದ ಬಾಂಧವ್ಯದ ಒಂದು ಭಾಗ ದೂರವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ.  ಬಾರ್ಡರ್ ಗವಾಸ್ಕರ್ ಸರಣಿ ಯನ್ನು 2-1 ಅಂತರದಲ್ಲಿ ಭಾರತ ಜಯಗಳಿಸಿದೆ. ಈ ಸರಣಿಯ ಎಲ್ಲ ಪಂದ್ಯಗಳಲ್ಲಿ ಎರಡು ರಾಷ್ಟ್ರಗಳ ಕೆಲವು ಆಟಗಾರರ ನಡುವೆ ಅತಿರೇಕದ ವರ್ತನೆ ನಡೆದಿದೆ.ಇದರಿಂದ ಈ ಎರಡು ತಂಡಗಳ ಸ್ನೇಹದಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ.

ಡಿಆರ್‍ಎಸ್ ವಿಚಾರ ವಾಗಿ ಆಸೀಸ್ ನಾಯಕ ಸ್ಟೀವನ್ ಸ್ಮಿತ್ ವಿರುದ್ದ ಪಂದ್ಯದ ವೇಳೆ ಆರೋಪ ಮಾಡಿದ್ದೆ. ಆದರೆ ನಂತರ ಅವರ ಬಳಿ ಕ್ಷಮೆ ಕೂಡ ಕೇಳಿದ್ದೆ. ಆದರೆ ಆಸ್ಟ್ರೇಲಿಯಾ ಮಾಧ್ಯಮಗಳು ನನ್ನನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಹೋಲಿಸಿ ಬರೆದಿವೆ ಎಂದು ವಿಷಾದ ವ್ಯಕ್ತಪಡಿಸಿದರು.   ಈ ಹಿಂದೆ ನಮ್ಮ ಮತ್ತು ಆಸ್ಟ್ರೇಲಿಯಾ ನಡುವೆ ಇದ್ದ ಬಾಂಧವ್ಯ ಈ ಸರಣಿಯ ನಂತರ ಕಳಚಿದೆ. ಆ ತಂಡ ಆಟವಾಡುವುದೇ ಸ್ಪರ್ಧೆಗಾಗಿ, ಅದಕ್ಕಾಗಿ ಅವರು ಪಂದ್ಯದ ವೇಳೆ ಎದುರಾಳಿ ಆಟಗಾರರ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಾರೆ. ಆದಾಗ್ಯೂ ಆಸ್ಟ್ರೇಲಿಯಾ ತಂಡದ ಕೆಲವು ಆಟಗಾರರ ನಡುವಿನ ಬಾಂಧವ್ಯ ಇಂದಿಗೂ ಉತ್ತಮವಾಗಿ ಮುಂದುವರೆದಿದೆ ಎಂದು ಕೊಹ್ಲಿ ಟ್ವಿಟ್ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin