ಭಾರತ ಮತ್ತು ವಿಯೆಟ್ನಾಂ ನಡುವೆ 12 ಮಹತ್ವದ ಒಪ್ಪಂದಗಳಿಗೆ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

Modi-0001

ಹನೋಯ್, ಸೆ.3- ರಕ್ಷಣೆ, ಮಾಹಿತಿ ತಂತ್ರಜನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಭಾರತ ಮತ್ತು ವಿಯೆಟ್ನಾಂ ನಡುವೆ 12 ಮಹತ್ವದ ಒಪ್ಪಂದಗಳಿಗೆ ಇಂದು ಸಹಿ ಹಾಕಿವೆ.   ವಿಯೆಟ್ನಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿ ಹನೋಯ್ನಲ್ಲಿ ಅಧ್ಯಕ್ಷ ಟ್ರಾನ್ ಡಾಯ್ ಕ್ವಾಂಟ್ ಅವರೊಂದಿಗೆ ಈ 12 ಮಹತ್ವದ ಒಡಂಬಡಿಕೆಗಳಿಗೆ ಸಹಿ ಹಾಕಿದ್ದಾರೆ.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ. ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಗೊಳಿಸಲು ವಿಯೆಟ್ನಾಂಗೆ 500 ದಶಲಕ್ಷ ಡಾಲರ್ಗಳ ಸಾಲಸೌಲಭ್ಯಗಳನ್ನು ಪ್ರಕಟಿಸಿದರು.  ವಿಯೆಟ್ನಾಂನಲ್ಲಿ ಕಾರ್ಯಗತಗೊಳ್ಳುತ್ತಿರುವ ಭಾರತದ ಯೋಜನೆಗಳು ಮತ್ತು ಹೂಡಿಕೆಗೆ ನೆರವಾಗಲು 2020ರ ವೇಳೆಗೆ 15 ಶತಕೋಟಿ ಡಾಲರ್ ದ್ವಿಪಕ್ಷೀಯ ವ್ಯಾಪಾರ-ವಹಿವಾಟು ಗುರಿಯನ್ನು ಮೋದಿ ನಿಗದಿಗೊಳಿಸಿದ್ದಾರೆ.

ವಿಯೆಟ್ನಾಂನಲ್ಲಿ ಸಾಫ್ಟ್ವೇರ್ ಪಾರ್ಕ್ ಸ್ಥಾಪನೆಗಾಗಿ ಭಾರತವು 5 ದಶಲಕ್ಷ ಡಾಲರ್ ಧನಸಹಾಯ ಮಾಡುವುದಾಗಿ ಪ್ರಧಾನಿಯವರು ಈ ಸಂದರ್ಭದಲ್ಲಿ ಘೋಷಿಸಿದರು.
ವಿಯೆಟ್ನಾಂನಲ್ಲಿ ಆಧುನಿಕ ಕೃಷಿ, ವಿಜನ ಮತ್ತು ತಂತ್ರಜನ, ಉದ್ಯಮಶೀಲತೆ ಮತ್ತು ಅನ್ವೇಷಣೆ ಹಾಗೂ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ದಿ ಕ್ಷೇತ್ರಲ್ಲಿ ವಿಯೆಟ್ನಾಂಗೆ ಅಗತ್ಯವಾಗಿರುವ ಎಲ್ಲ ಸಹಕಾರ ಮತ್ತು ಬೆಂಬಲವನ್ನು ಭಾರತ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.  ಇದಕ್ಕೂ ಮುನ್ನ ಏಷ್ಯಾದ ಮೋದಿಯವರಿಗೆ ಇಲ್ಲಿನ ಭವ್ಯ ಅಧ್ಯಕ್ಷರ ಅರಮನೆಯ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಕಮ್ಯೂನಿಸ್ಟ್ ರಾಷ್ಟ್ರವಾದ ವಿಯೆಟ್ನಾಂಗೆ 15 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು. ರಾಜಧಾನಿ ಹನೋಯ್ನಲ್ಲಿ ಮೋದಿಯವರಿಗೆ ವಿಯೆಟ್ನಾಂ ಅಧ್ಯಕ್ಷ ಟ್ರಾನ್ ಡಾಯ್ ಕ್ವಾಂಟ್ ಭವ್ಯ ಸ್ವಾಗತ ಕೋರಿದರು.   ನವದೆಹಲಿಯಿಂದ ನಿನ್ನೆ ರಾತ್ರಿ ವಿಮಾನದಲ್ಲಿ ವಿಯೆಟ್ನಾಂಗೆ ಆಗಮಿಸಿದ ಮೋದಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಈ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅವರು ಸಂಜೆ ಚೀನಾಗೆ ಪ್ರಯಾಣ ಬೆಳೆಸುವರು.

► Follow us on –  Facebook / Twitter  / Google+

Facebook Comments

Sri Raghav

Admin