ಭಾರತ ರತ್ನ ವಾಜಪೇಯಿ ಮತ್ತು ಪಾಕ್ ಪ್ರಧಾನಿ ಶರೀಫ್ ಗೆ ಹುಟ್ಟುಹಬ್ಬದ ಶುಭಾಷಯ ಕೋರಿದ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-Wish-01

ನವದೆಹಲಿ. ಡಿ. 25 : ಭಾರತ ರತ್ನ ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯ ಕೋರಿದ್ದಾರೆ. ಪ್ರೀತಿಯುತ ಹಾಗೂ ಗೌರವಯುತ ಅಟಲ್ ಬಿಹಾರಿ ವಾಜಪೇಯಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ. . ಅಲ್ಲದೆ, ಬಿಜೆಪಿ ಕಾರ್ಯಕರ್ತನಾಗಿದ್ದ ಸಂದರ್ಭದಲ್ಲಿ ವಾಜಪೇಯಿಯವರನ್ನು ಆಲಂಗಿಸಿ ಶುಭಾಶಯ ಕೋರಿದ್ದ ವಿಡಿಯೋವೊಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.

ನವಾಜ್ ಷರೀಫ್ ಗೂ ಶುಭಾಷಯ ಕೊಡಿದ ಮೋದಿ :
ಇಂದು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರೂ ಕೂಡ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ನವಾಜ್ ಷರೀಫ್ ಅವರಿಗೂ ಟ್ವಿಟರ್ ನಲ್ಲಿ ಮೋದಿ ಶುಭಾಶಯ ಕೋರಿದ್ದಾರೆ.

ಕ್ರಿಸ್ ಮಸ್ ಶುಭಾಷಯ :

ಇಂದು ದೇಶದಾದ್ಯಂತ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ದೇಶದ ಜನತೆಗೆ ಶುಭಾಶಯ ಪ್ರಧಾನಿ ಮೋದಿ ಕ್ರೈಸ್ತ ಬಾಂಧವರಿಗೆ ಶುಭಾಷಯ ಕೋರಿದ್ದಾರೆ. ಮೇರಿ ಕ್ರಿಸ್’ಮಸ್..! ಯೇಸು ಕ್ರಿಸ್ತನ ಜೀವನ ಹಾಗೂ ಅವರ ಹೇಳಿಕೊಟ್ಟ ಪಾಠವನ್ನು ನಾವು ನೆನೆಯುತ್ತಿದ್ದೇವೆ, ಆಚರಿಸುತ್ತಿದ್ದೇವೆ. ಶಾಂತಿ, ಏಕತೆ ಮತ್ತು ಸಹಾನುಭೂತಿ ನಮಗೆ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin